Voice Of Dharma-ವಾಯ್ಸ್ ಆಫ್ ಧರ್ಮ

Voice Of Dharma-ವಾಯ್ಸ್ ಆಫ್ ಧರ್ಮ

ಚಿಕಾಗೊ ಭಾಷಣಕ್ಕೆ 127 ಆಯ್ತು. ಈ ಹಿನ್ನೆಲೆಯಲ್ಲಿಯೇ ವಿವೇಕಾನಂದರ ಹಿಂದೂಧರ್ಮದ ಕುರಿತ ವಿಚಾರಗಳನ್ನು ಕ್ರೋಢೀಕರಿಸಿ “ವಿಶ್ವಧರ್ಮವಾಗುವಲ್ಲಿ ಹಿಂದೂಧರ್ಮಕ್ಕಿರುವ ಸಾಧ್ಯತೆಗಳು- ವಿವೇಕಾನಂದರ ಚಿಂತನೆ” ಎನ್ನುವ ವಿಷಯದ ಮೇಲೆ ಮಹಾಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. 18 ವರ್ಷಕ್ಕೆ ಮೇಲ್ಪಟ್ಟವರು ಯಾರಾದರೂ ಇದರಲ್ಲಿ‌ ಭಾಗವಹಿಸಬಹುದಾಗಿತ್ತು. ಚಿಕಾಗೊ ಸರ್ವಧರ್ಮ ಸಮ್ಮೇಳನದ ಹೊತ್ತಿನಲ್ಲಿಯೇ ಸ್ವಾಮೀಜಿ ವಿಶ್ವಧರ್ಮದ (universal religion) ಕುರಿತಂತೆ ಮಾತನಾಡುತ್ತ ಅದರ ಪರಿಕಲ್ಪನೆಯನ್ನು ವಿಷದವಾಗಿ ವಿವರಿಸುತ್ತಾರೆ. ಮುಂದೆ ತಮ್ಮ ಪಶ್ಚಿಮದ ಪ್ರವಾಸದ ಉದ್ದಕ್ಕೂ ಹಿಂದೂಧರ್ಮದ ಚಿಂತನೆಗಳನ್ನು ಅನಾವರಣಗೊಳಿಸುತ್ತಾ ವೈಶ್ವಿಕ ಪರಿಕಲ್ಪನೆಯನ್ನು ಬಿಚ್ಚಿಡುತ್ತಾರೆ. ಇವೆಲ್ಲವನ್ನೂ ಮುಂದಿಟ್ಟುಕೊಂಡು ವಿಶ್ವಧರ್ಮದ ವಿವೇಕಾನಂದರ ಕಲ್ಪನೆಗಳಿಗೆ ಅವರೇ ಕಟ್ಟಿಕೊಡುವ ಹಿಂದೂಧರ್ಮದ ಚಿಂತನೆಗಳು ಹೇಗೆ ಪೂರಕವಾಗಿ ನಿಲ್ಲುತ್ತವೆ ಎಂಬುದನ್ನು ಒಂದೂವರೆ ಸಾವಿರ ಪದಗಳಿಗೆ ಮೀರದಂತೆ ಕನ್ನಡದಲ್ಲಿ ರಚಿಸಬೇಕಾಗಿರುವುದು ಪ್ರಬಂಧದ ಒಟ್ಟು ನಿಯಮವಾಗಿತ್ತು.

ಬಂದಿರುವ ನೂರಕ್ಕೂ ಹೆಚ್ಚು ಪ್ರಬಂಧಗಳ ನಡುವೆ ಮೊದಲ ಹಂತದಲ್ಲಿ 40ನ್ನು ಆಯ್ಕೆಮಾಡಿ ನಿರ್ಣಾಯಕರಿಗೆ ಕಳಿಸಿಕೊಡಲಾಯಿತು. ಅವರು ಅವುಗಳಲ್ಲಿ 20ನ್ನು ಆಯ್ಕೆ ಮಾಡಿ ಸೂಚಿಸಿದರು. ಮೂರು ಪ್ರಬಂಧಗಳು ಪ್ರಕಟಣೆಗೂ ಯೋಗ್ಯವೆಂದು ತೀರ್ಮಾನಿಸಲಾಯಿತು. ಎರಡನೇ ಹಂತದ ಸ್ಪರ್ಧೆಯಲ್ಲಿ ಮೂವರು ವಿಜೇತರನ್ನು ಆಯ್ಕೆಮಾಡಲಾಯಿತು. ಶಶಾಂಕ್ ರಾನಡೆ, ರಾಹುಲ್ ಹಜಾರೆ, ಗೀತಾ ರಾಜೂರ್ ಅವರು ಕ್ರಮವಾಗಿ ಒಂದನೇ, ಎರಡನೇ ಮತ್ತು ಮೂರನೇ ಬಹುಮಾನಗಳಿಗೆ ಆಯ್ಕೆಯಾದರು.

top