Spark-ಸ್ಪಾರ್ಕ್

Spark-ಸ್ಪಾರ್ಕ್

Yuva brigade came up with a special program called “Spark” in collaberation with Deena bandhu trust of chamarajanagara, Teaching government school students to get interest in the field of science, with more than 40 science experiments in a box shaped kit.
ಚಾಮರಾಜನಗರದ ದೀನಬಂಧು ಟ್ರಸ್ಟ್‌ನ ಸಹಯೋಗದೊಂದಿಗೆ ಯುವಾಬ್ರಿಗೇಡ್ ವಿದ್ಯಾರ್ಥಿಗಳಿಗೆ ಸಂಚಾರಿ ವೈಜ್ಞಾನಿಕ ಪ್ರಯೋಗ ಪ್ರದರ್ಶನಗಳನ್ನು ನೀಡುವ spark ಎನ್ನುವ ವಿನೂತನ ಯೋಜನೆಯೊಂದನ್ನು ಆರಂಭಿಸಿದೆ. ಈ ಯೋಜನೆಯನ್ನು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರು ಉದ್ಘಾಟಿಸಿದರು. ದ್ವಿಚಕ್ರ ವಾಹನ ಸವಾರನೊಬ್ಬ ತನ್ನ ಹಿಂದೆ ಇರುವ ಡಬ್ಬವೊಂದರಲ್ಲಿ 40ಕ್ಕೂ ಹೆಚ್ಚು ಪ್ರಾಯೋಗಿಕ ಸಾಮಗ್ರಿಗಳನ್ನು ತುಂಬಿಸಿಕೊಂಡು ಹಳ್ಳಿ-ಹಳ್ಳಿಗೆ ಹೋಗಬಹುದಲ್ಲದೇ ನಾಲ್ಕಾರು ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ವಿಜ್ಞಾನವನ್ನು ಪ್ರಯೋಗದ ಮೂಲಕ ವಿವರಿಸಬಹುದು. ಆ ಮೂಲಕ ಶಾಲೆ ಇಲ್ಲದಾಗಲೂ ಆ ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿ ಹೆಚ್ಚಿಸಲು ಸಹಕರಿಸಬಹುದು. ಇಷ್ಟೆ ಅಲ್ಲ, ಭಾರತದ ವೈಜ್ಞಾನಿಕ ಮತ್ತು ಗಣಿತೀಯ ಸಾಧನೆಗಳನ್ನು ಪರಿಚಯಿಸುವ ಪುಟ್ಟದೊಂದು ಪ್ರದರ್ಶನವೂ ಇದರಲ್ಲಿ ಸೇರಿದೆ. ವಿಜ್ಞಾನದ ವಿದ್ಯಾರ್ಥಿಯಾದವ, ಸ್ವಲ್ಪಮಟ್ಟಿಗೆ ಮಕ್ಕಳನ್ನು ಸಂಭಾಳಿಸಲು ಬಲ್ಲವ ಈ ಪೆಟ್ಟಿಗೆಯೊಂದಿಗೆ ನೂರಾರು ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಹುಟ್ಟಿಸಿಬಿಡಬಲ್ಲ, ಹಾಗೆಯೇ ಇದನ್ನು ರೂಪುಗೊಳಿಸಲಾಗಿದೆ.

ಫೆಬ್ರವರಿ ೨೦೨೧ ಮುಗಿಯುವ ಹೊತ್ತಿಗೆ ರಾಜ್ಯದಾದ್ಯಂತ ನಡೆದಿರುವ ಸ್ಪಾರ್ಕ್ ಕಾರ್ಯಕ್ರಮಗಳ ವಿವರಗಳು

 • ಯುವಾಬ್ರಿಗೇಡ್‌, ಕಲಬುರ್ಗಿ ವತಿಯಿಂದ ಸ್ಪಾರ್ಕ್ ಕಾರ್ಯಕ್ರಮದ ಮೂಲಕ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸರ್ಕಾರಿ ಕನ್ಯಾ ಪ್ರೌಢ ಶಾಲೆ, ಹಾಗರಗುಂಡಗಿ ಗ್ರಾಮದ ಸರಕಾರಿ ಹಿರಿಯ ಪ್ರೌಢಶಾಲೆ, ಚೇತನ್ ಯೂಥ್ ಫೋರಂ ಪ್ರೌಢ ಶಾಲೆ, ಬಿದ್ದಾಪುರ ಗ್ರಾಮದ ಶ್ರೀ ಯಲ್ಲಾಲಿಂಗ ಮಹಾರಾಜ ಪ್ರೌಢಶಾಲೆ, ಮಹಾನಂದಾ ಮಹಿಳಾ ಪ್ರೌಢ ಶಾಲೆ, ಶ್ರೀಶರಬಯ್ಯ ಗಾದಾ ಕನ್ಯಾ ಪ್ರೌಢ ಶಾಲೆ, ಆಳಂದ ತಾಲ್ಲೂಕಿನ ಚಿಂಚನಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪ್ರೌಢ ಶಾಲೆ, ಕೆ. ಎಸ್. ಆರ್. ಪಿ. ಕಾಲೋನಿ, ತಾಜ ಸುಲ್ತಾನಪೂರ ಶಾಲೆ,ಫರತಾಬಾದ್ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಮಹಾಂತಪ್ಪ ಅಲ್ಲದ ಪ್ರೌಢಶಾಲೆ, ಹೀರಾಪುರ ಕ್ರಾಸ್ ಬಳಿಯ ಕರ್ನಾಟಕ ಪ್ರೌಢಶಾಲೆ, ನ್ಯೂ ಆಜಾದ್ ಪಬ್ಲಿಕ್ ಶಾಲೆ, ಕಲಬುರಗಿ ತಾಲೂಕಿನ ಭೂಪಾಲ ತೆಗನೂರು ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರೌಢಶಾಲೆ, ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಒಟ್ಟು 1384 ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡುವಂತೆ ಸರಳ ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆಯನ್ನು ಯಶಸ್ವಿಯಾಗಿ ನೀಡಲಾಯಿತು.
 • ಯುವಾಬ್ರಿಗೇಡ್‌ ಧಾರವಾಡ ವತಿಯಿಂದ, ಭಾರತಿ ವಿಶ್ವ ಸೇವಾ ಸದನ ಸರ್ಕಾರಿ ಪ್ರೌಢಶಾಲೆ ಸೋಮಾಪುರ ದಲ್ಲಿ ಶಾಲೆ, ಗುಲಗುಂಜಿಕೊಪ್ಪ, ಉಣಕಲ್ ಗ್ರಾಮದ ವಿಶ್ವಭಾರತಿ ಬಾಲಕಿಯರ ಪ್ರೌಢಶಾಲೆ, ಹುಬ್ಬಳ್ಳಿ ತಾಲ್ಲೂಕ ಚಲಮಟ್ಟಿ, ಹುಬ್ಬಳ್ಳಿ ತಾಲ್ಲೂಕ ವೀರಾಪುರ ಓಣಿ ಮುಂತಾದ ಕಡೆಗಳಲ್ಲಿ 220ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ spark ಕಾರ್ಯಕ್ರಮ ನಡೆಸಿ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲಾಯಿತು.
 • ಯುವಾ ಬ್ರಿಗೇಡ್ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಸರ್ ಎಂ, ವಿಶ್ವೇಶ್ವರಯ್ಯ ಪ್ರೌಢಶಾಲೆ, ಕುಷ್ಟಗಿ ತಾಲೂಕಿನ ತಾವರಗೇರಾ ಸರಕಾರಿ ಬಾಲಕಿಯರ ಪ್ರೌಢಶಾಲೆ , ಗಿಣಿಗೇರಾ ಗ್ರಾಮ, ಯಲಬುರ್ಗಾ ತಾಲೂಕಿನ ಲಕಮಾಪುರ, ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮ, ಅಗಳಕೇರಾ ಗ್ರಾಮ ಚಿಕ್ಕಸಿಂದೋಗಿ ಗ್ರಾಮ, ಕೊಪ್ಪಳ ನಗರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮವಾರ ಪೇಟೆ, ರಾಮ ಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೇವಾ ಭಾರತಿ ಶಾಲೆಯಲ್ಲಿ 485ಕ್ಕೂ ಹೆಚ್ಚಿನ ಮಕ್ಕಳಲ್ಲಿ ವಿಜ್ಞಾನದ ಕಿಡಿ ಹತ್ತಿಸಲಾಯಿತು.
 • ಯುವಾ ಬ್ರಿಗೇಡ್ ನಂಜನಗೂಡು ವತಿಯಿಂದ ಕಳಲೆಯ ಸರ್ಕಾರಿ ಪ್ರೌಢ ಶಾಲೆ. ಮತ್ತು ಸುಬ್ಬಣ್ಣ ಸಹಕಾರಿ ಶಾಲೆ, ಜೆ.ಎಸ್.ಎಸ್.ಪ್ರೌಢಶಾಲೆ, ಹೊರೆಯಾಲ ಮತ್ತು ಆದರ್ಶ ವಿದ್ಯಾಲಯ ಮುಂತಾದ ಹದಿನಾರು ಗ್ರಾಮದ ಪ್ರೌಢ ಶಾಲಾ ಮಕ್ಕಳಿಗೆ 100ಕ್ಕೂ ಹೆಚ್ಚಿನ ಸ್ಪಾರ್ಕ್ ಕಾರ್ಯಕ್ರಮದ ಮೂಲಕ ವಿಜ್ಞಾನದ ಅನೇಕ ವಿಚಾರಗಳನ್ನು ಆಸಕ್ತಿಕರವಾಗಿ ತಿಳಿಸಲಾಯಿತು, ಅದಲ್ಲದೇ 202 ಶಾಲೆಯ ಶಿಕ್ಷಕರುಗಳಿಗೆ ಸರಳ ಪ್ರಯೋಗಗಳ ಮೂಲಕ spark ಕಾರ್ಯಕ್ರಮವನ್ನು ನಡೆಸಿದ್ದು ವಿಶೇಷವಾಗಿತ್ತು.
 • ಯುವಾಬ್ರಿಗೇಡ್‌ ಮೈಸೂರು ವತಿಯಿಂದ ಮೈಸೂರು ಜಿಲ್ಲೆಯ ಹಿಟ್ನೆ ಹೆಬ್ಬಾಗಿಲು ಸರ್ಕಾರಿ ಪ್ರೌಢಶಾಲೆ, ಟಿ ನರಸೀಪುರ ಮತ್ತು ಪಾಂಡವಪುರ ತಾಲ್ಲೂಕಿನ ವಿವಿಧೆಡೆ ಸ್ಪಾರ್ಕ್ ಕಾರ್ಯಕ್ರಮದ ಮ‌ೂಲಕ ಮಕ್ಕಳಿಗೆ ವಿಜ್ಞಾನದ ಪ್ರಯೋಗಗಳನ್ನು ತೋರಿಸಿಕೊಡಲಾಯ್ತು.
 • ಯುವಾಬ್ರಿಗೇಡ್‌ ರಾಯಚೂರು ವತಿಯಿಂದ, ಸ್ಪಾರ್ಕ್ ಕಾರ್ಯಕ್ರಮದ ಮೂಲಕ ಮನ್ಸಾಲಾಪೂರ ಸರ್ಕಾರ ಶಾಲೆ, ಜಾಗೀರ್ ವೆಂಕಟಾಪೂರ ಗ್ರಾಮ ಪ್ರೌಢಶಾಲೆಯಲ್ಲಿ 65ಕ್ಕೂ ಹೆಚ್ಚಿನ ಮಕ್ಕಳಿಗೆ ವಿಜ್ಞಾನದ ಅನೇಕ ವಿಚಾರಗಳನ್ನು ಪ್ರಯೋಗದ ಮೂಲಕ ತೋರಿಸಿಕೊಡಲಾಯಿತು
 • ಯುವಾಬ್ರಿಗೇಡ್‌ ಹಾವೇರಿ ವತಿಯಿಂದ ಹಾವೇರಿ ತಾಲೂಕಿನ ತೋಟದ ಯಲ್ಲಾಪುರ ಗ್ರಾಮದಲ್ಲಿ ಸ್ಪಾರ್ಕ್ ಕಾರ್ಯಕ್ರಮದ ಮೂಲಕ 37 ಮಕ್ಕಳಿಗೆ ವಿಜ್ಞಾನದ ಅನೇಕ ವಿಚಾರಗಳನ್ನು ಪ್ರಯೋಗದ ಮೂಲಕ ತೋರಿಸಿಕೊಡಲಾಯಿತು.
  ಯುವಾಬ್ರಿಗೇಡ್‌ ಬಾಗಲಕೋಟೆ ವತಿಯಿಂದ ನಿನ್ನೆ ತೇರದಾಳದ ಸಿದ್ಧೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆ, ರಬಕವಿ-ಬನಹಟ್ಟಿಯ ರಾಂಪುರದ ನೀಲಕಂಠೇಶ್ವರ ಮಠ, ಬೀಳಗಿ ತಾಲೂಕಿನ G H P S ಯಂಕಂಚಿ ಶಾಲೆ, G H P S ಸುನಗ ಶಾಲೆ, ಬದಾಮಿ ತಾಲೂಕಿನ ನಂದಿಕೇಶ್ವರದ ಕೊಟ್ಟೂರು ಬಸವೇಶ್ವರ ಆಯಿಲ್‌ ಮಿಲ್‌ನಲ್ಲಿ R M S A & G P S ಶಾಲೆಯಲ್ಲಿ ಸುಮಾರು 332 ಮಕ್ಕಳಿಗೆ ವಿಜ್ಞಾನದ ಅನೇಕ ವಿಚಾರಗಳನ್ನು ಪ್ರಯೋಗದ ಮೂಲಕ ತೋರಿಸಿಕೊಡಲಾಯ್ತು.
 • ಯುವಾ ಬ್ರೀಗೆಡ್ ಬೆಳಗಾವಿ ವತಿಯಿಂದ ಅಥಣಿ ನಗರದ ಭರತ ನೃತ್ಯ ಶಾಲೆ, ಶೆಟ್ಟರ ಮಠ ಗಲ್ಲಿ ಹಾಗೂ ದಾನಮ್ಮ ದೇವಸ್ಥಾನ, ಅಥಣಿ ತಾಲೂಕಿನ ಹೊಸಟ್ಟಿ ಗ್ರಾಮ ಹಾಗೂ ಹಣಮಾಪುರ ತೋಟದಲ್ಲಿ ಸ್ಪಾರ್ಕ್ ಕಾರ್ಯಕ್ರಮದ ವಿಜ್ಞಾನದ ಸರಳ ಪ್ರಯೋಗದ ಮೂಲಕ 100ಕ್ಕೂ ಹೆಚ್ಚು ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲಾಯಿತು.
 • ಯುವಾಬ್ರಿಗೇಡ್‌ ದಾವಣಗೆರೆ ವತಿಯಿಂದ, ಸ್ಪಾರ್ಕ್ ಕಾರ್ಯಕ್ರಮದ ಮೂಲಕ ಹಳೇಬಾತಿ ಹಾಗೂ ಗುಡ್ಡದ ಕ್ಯಾಂಪ್ ಮಕ್ಕಳಿಗೆ ವಿಜ್ಞಾನದ ಅನೇಕ ವಿಚಾರಗಳನ್ನು ಪ್ರಯೋಗದ ಮೂಲಕ ತೋರಿಸಿಕೊಡಲಾಯ್ತು.
 • ಯುವಾಬ್ರಿಗೇಡ್‌ ನ್ಯಾಮತಿ ವತಿಯಿಂದ ತಾಲೂಕಿನ ಸವಳಂಗ, ಅರಬಗಟ್ಟೆ ಮತ್ತು ದಾನಿಹಳ್ಳಿ ಗ್ರಾಮದಲ್ಲಿ 380ಕ್ಕೂ ಹೆಚ್ಚು ಮಕ್ಕಳಿಗೆ ವಿಜ್ಞಾನದ ಅನೇಕ ವಿಚಾರಗಳನ್ನು ಪ್ರಯೋಗದ ಮೂಲಕ ತೋರಿಸಿಕೊಡಲಾಯ್ತು.
 • ಯುವಾ ಬ್ರೀಗೆಡ್ ಕಾಗವಾಡ ತಾಲೂಕು ವತಿಯಿಂದ KRES ಶಾಲೆಯಲ್ಲಿ ಸ್ಪಾರ್ಕ್ ಕಾರ್ಯಕ್ರಮವನ್ನು ನಡೆಸಿ ಸುಮಾರು 50 ಕ್ಕೂ ಹೆಚ್ಚು ಮಕ್ಕಳಿಗೆ ವಿಜ್ಞಾನದ ಅನೇಕ ವಿಚಾರಗಳನ್ನು ಪ್ರಯೋಗದ ಮೂಲಕ ತೋರಿಸಿಕೊಡಲಾಯ್ತು
top