Param Veer-ಪರಮ್ ವೀರ್

Param Veer-ಪರಮ್ ವೀರ್

Every month last Saturday at Military memorial in Bengaluru Yuva Brigade undertakes Param Veer Programme to honour Military Personnel.
ಪ್ರತಿ ತಿಂಗಳ ಕೊನೆಯ ಶನಿವಾರ ದೇಶ ಕಾಯ್ದ ಯೋಧನ ಕಥೆ ಕೇಳುವ “ಪರಮ್ ವೀರ್” ಯುವಾ ಬ್ರಿಗೇಡ್ ನ ವಿಶಿಷ್ಟ ಕಾರ್ಯಕ್ರಮಗಳಲ್ಲೊಂದು. ಕೆಲವು ಪ್ರಯೋಗಗಳು ಮನಸ್ಸಿಗೆ ಮುದ ನೀಡುವಂಥದ್ದು. ಇಂಥದ್ದೇ ಒಂದು ಪ್ರಯೋಗ ಇತ್ತೀಚೆಗೆ ಮಿಲಿಟರಿ ಮೆಮೊರಿಯಲ್ ಆವರಣದಲ್ಲಿ ನಡೆಯಿತು. ಮೇಜರ್ ಅಕ್ಷಯ್ ಗಿರೀಶ್ ಅವರ ತಾಯಿ ಮೇಘನಾ ಗಿರೀಶ್ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೇ ಈ ಕಲ್ಪನೆ ಮೊಳಕೆಯೊಡೆದಿತ್ತು. ಪ್ರತಿ ತಿಂಗಳು ಕನಿಷ್ಠ ಎರಡು ಗಂಟೆಗಳಾದರೂ ವೀರ ಯೋಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಮಾಡಬೇಕೆಂಬ ನಿರ್ಣಯವನ್ನು ಅಲ್ಲಿಯೇ ತೆಗೆದುಕೊಳ್ಳಲಾಯ್ತು. ಅದು ಯುವಾಬ್ರಿಗೇಡ್‌ನ ವೈಶಿಷ್ಟ್ಯ.

ಯುವಾ ಬ್ರಿಗೇಡ್ ಆಯೋಜಿಸಿರುವ ಪರಮ್ ವೀರ್ ಕಾರ್ಯಕ್ರಮಗಳ ಪಟ್ಟಿ ಕೆಳಗಿನಂತಿದೆ.

  • ದಿನಾಂಕ: 27.03.2021ರಂದು ನಡೆದ ಪರಮ್ ವೀರ್ ಕಾಯ್ದವನ ಕಥೆ ಬಲು ವಿಶೇಷವಾಗಿತ್ತು. ಕುಮಾರಿ ರಕ್ಷಿತಾ ದೇಶಭಕ್ತಿಗೀತೆಗಳನ್ನು ಸೊಗಸಾಗಿ ಹಾಡಿದರು. ಶೌರ್ಯ ಚಕ್ರ ಪುರಸ್ಕೃತರಾದ ಕೃಷ್ಣಮೂರ್ತಿ ಜಿ ಅವರು ಸೈನ್ಯದ ಪೋಸ್ಟ್ ಗಳಲ್ಲಿ, ಯುದ್ಧದ ಸಮಯದಲ್ಲಿ, ಅಧಿಕಾರಿಗಳ ಜೊತೆಯಲ್ಲಿ, ಶತ್ರು ಸೈನಿಕರ ಎದುರುನಿಂತಾಗ ನಡೆದ ರೋಚಕ ಘಟನೆಗಳನ್ನು, ಜನಸಾಮಾನ್ಯರಿಗೆ ಗೊತ್ತಿರದ ಸೇನೆಯ ಕೆಲವು ಸೂಕ್ಷ್ಮ ವಿಚಾರಗಳನ್ನು ಮತ್ತು ತನ್ನ ಕುಟುಂಬದವರ ಜೊತೆ ಅನಿವಾರ್ಯವಾಗಿ ಹೇಳಬೇಕಾಗಿ ಬರುವ ಸುಳ್ಳುಗಳು ಇದನ್ನೆಲ್ಲ ಎಳೆಎಳೆಯಾಗಿ ಬಿಚ್ಚಿಟ್ಟರು. ಒಬ್ಬ ಅನುಭವಿ ಯೋಧನ ಮಾತು ಕೇಳುಗರನ್ನು ಮಂತ್ರಮುಗ್ಧಗೊಳಿಸಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
  • 2021ರ ಫೆಬ್ರವರಿ 27ರ ಶನಿವಾರ ಬೆಂಗಳೂರಿನ ಮಿಲಿಟರಿ ಮೊಮೆರಿಯಲ್ ಆವರಣದಲ್ಲಿ ಎರಡನೆಯ #ಪರಮ್_ವೀರ್ ಕಾರ್ಯಕ್ರಮ ಈ ಬಾರಿ ಹವಾಲ್ದಾರ್ ವೇಣು ಚಿನ್ನಪ್ಪನವರನ್ನು ಗೌರವಿಸಲಾಯಿತು, ಪ್ರಥ್ವಿ ಭಟ್ ಅವರು ಸುಮಧುರ ದೇಶಭಕ್ತಿಗೀತೆಗಳನ್ನು ಹಾಡಿ ಗಮನಸೆಳೆದರು. ಚಕ್ರವರ್ತಿ ಸೂಲಿಬೆಲೆಯವರು ಯೋಧರ ರೋಚಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿದರು.
  • ದಿನಾಂಕ:30.01.2021 ರಂದು ಬೆಂಗಳೂರಿನ ಮಿಲಿಟರಿ ಮೆಮೋರಿಯಲ್ ಆವರಣದಲ್ಲಿ ಜರುಗಿದ “ಪರಮ್ ವೀರ್” ವಿಶೇಷ ಕಾರ್ಯಕ್ರಮದಲ್ಲಿ ಲಾನ್ಸ್ ಹವಿಲ್ದಾರ್ ಲೂಯಿಸ್ ಪೆರಿಯನಾಯಗಮ್ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಉದ್ದೇಶದ ಕುರಿತು ಮತ್ತು ಹಿರಿಯ ಸೇನಾಧಿಕಾರಿಗಳಾಗಿದ್ದ ಮಾಣಿಕ್ ಷಾ ಅವರ‌ ಸೇನಾ ಚಾತುರ್ಯ ಮತ್ತು ಶೌರ್ಯದ ಕುರಿತು ಯುವಾ ಬ್ರಿಗೇಡ್‌ನ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿದರು ಹಾಗೂ ಶೃತಿ ರಾಘವೇಂದ್ರ ಅವರ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿತ್ತು. ಎಲ್ಲಕ್ಕೂ ವಿಶೇಷವೆಂದರೆ ಅನೇಕ ಪೋಷಕರು ತಮ್ಮ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಕರೆತಂದಿದ್ದರು. ಏಕೆಂದು ಕೇಳಿದಾಗ ಈ ಪ್ರೇರಣೆಯಿಂದ ಇವರೂ ರಾಷ್ಟ್ರಕ್ಕೆ ಒಳಿತು ಮಾಡುವಂತಾಗಲಿ ಎಂದರು ಕೆಲವರು. ವಾಹ್! ಆಗಬೇಕಾದ್ದು ಇದೇ ಅಲ್ಲವೇ? ನಮ್ಮ ಉತ್ಸಾಹವಂತೂ ನೂರ್ಮಡಿಯಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಇನ್ನೂ ರಂಗೇರಲಿದೆ.

top