Growth Engines

Growth Engines

ಇಂಜಿನಿಯರ್‌ಗಳು ರಾಷ್ಟ್ರದ growth engine ಗಳು. ಸೆಪ್ಟೆಂಬರ್ 11 ಖ್ಯಾತ ಇಂಜಿನಿಯರ್ ಸರ್.ಎಂ ವಿಶ್ವೇಶ್ವರಯ್ಯನವರು ಹುಟ್ಟಿದ ದಿನ, ಈ ದಿನದ ಸವಿ ನೆನಪಿಗೆಂದೇ ಇಂಜಿನಿಯರ್‌ಗಳೊಂದಿಗೆ ಸಪ್ಟೆಂಬರ್ 20ರ (೨೦-೦೯-೨೦೨೦) ಭಾನುವಾರ ವಿಶೇಷ zoom meeting ಆಯೋಜಿಸಲಾಗಿತ್ತು. ರಾಷ್ಟ್ರ ನಿರ್ಮಾಣದಲ್ಲಿ ಅನೇಕ ಸವಾಲುಗಳು ನಮ್ಮೆದುರಿಗಿವೆ. ಅದಕ್ಕೆ ಪರಿಹಾರವನ್ನು ಜೊತೆಯಾಗಿಯೇ ಕಂಡುಕೊಳ್ಳಬೇಕಿದೆ. ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳು, ಅದಾಗಲೇ ಈ ದಿಕ್ಕಿನ ಭಿನ್ನ-ಭಿನ್ನ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ವಿಶ್ವೇಶ್ವರಯ್ಯನವರ ಮೊಮ್ಮಗ ಸತೀಶ್ ಮೋಕ್ಷಗುಂಡಂ ಅವರು ವಿಶ್ವೇಶ್ವರಯ್ಯನವರ ಅಪರೂಪದ ವ್ಯಕ್ತಿತ್ವದ ಪರಿಚಯ ಮಾಡಿಸಿದರು. ಇಂಜಿನಿಯರಿಂಗ್ ಕ್ಷೇತ್ರದ ಖ್ಯಾತನಾಮರಾದ ಸುಧೀಂದ್ರ ಹಾಲ್ದೊಡ್ಡೇರಿ, ಸುಹಾಸ್ ಗೋಪಿನಾಥ್, ಕೆ ಕರಿಸಿದ್ದಪ್ಪ ಅವರು online ನಲ್ಲಿ ಸೇರಿರುವ ಆಸಕ್ತ ಇಂಜಿನಿಯರ್ ಗಳಿಗೆ ಅನುಭವದ ಮಾತುಗಳೊಂದಿಗೆ ಮಾರ್ಗದರ್ಶನ ಮಾಡಿದರು, ಜೊತೆಗೆ ಚಕ್ರವರ್ತಿ ಸೂಲಿಬೆಲೆಯವರು ಇಂಜಿನಿಯರ್ ವೃತ್ತಿ ತ್ಯಜಿಸಿ ಕೃಷಿ ಕ್ಷೇತ್ರಕ್ಕಿಳಿದ ವ್ಯಕ್ತಿಯೊಬ್ಬರನ್ನು ಪರಿಚಯಿಸಿ “ಇಂಜಿನಿಯರಿಂಗ್ ಎನ್ನುವುದು ಒಂದು ದೃಷ್ಟಿಕೋನವಾಗಿದ್ದು, ಅದು ಎಲ್ಲಾ ಕ್ಷೇತ್ರಕ್ಕೆ ಅನ್ವಯಿಸುವಂತದ್ದು” ಎನ್ನುವ ಪ್ರೇರಣಾದಾಯಿ ಮಾತುಗಳನ್ನಾಡಿದರು.

top