Fight Corona

Fight Corona

ಮೈಸೂರಿನ ಯುವಾಬ್ರಿಗೇಡ್ ಕಾರ್ಯಕರ್ತರು ಕರೋನಾ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ವಾರ್ ರೂಮ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಧ್ಯರಾತ್ರಿಯವರೆಗೂ ವಾರ್ ರೂಮ್ ಗೆ ಬರುವ ಕರೋನಾ ರೋಗಿಗಳ ಕರೆಯನ್ನು ಸ್ವೀಕರಿಸಿ, ಜಿಲ್ಲಾಧಿಕಾರಿಗಳಿಂದಲೂ ಮೆಚ್ಚುಗೆ ಪಡೆದಿದ್ದರು.

ಕರೋನಾಗೆ ವ್ಯಾಕ್ಸಿನ್ ಪಡೆದ 45 ದಿನಗಳ ಕಾಲ ರಕ್ತವನ್ನು ನೀಡುವಂತಿಲ್ಲ. ಈ ನಿಟ್ಟಿನಲ್ಲಿ ಹಾವೇರಿಯ ಕಾರ್ಯಕರ್ತರು ವ್ಯಾಕ್ಸಿನ್ ಪಡೆಯುವ ಮುನ್ನವೇ ಸ್ಥಳೀಯ ಸಂಘ-ಸಂಸ್ಥೆಗಳ ನೆರವಿನೊಂದಿಗೆ ರಕ್ತದಾನ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿತು. ಯುವಾಬ್ರಿಗೇಡ್ ನ ಸುಮಾರು 20 ಕಾರ್ಯಕರ್ತರು ಈ ಸಮಯದಲ್ಲಿ ರಕ್ತದಾನ ಮಾಡಿದರು.

top