Fifth Pillar

Fifth Pillar

“Fifth pillar” is the program organised by vittashakti team of yuva brigade to inspire people who is interested in doing any business. Arranging speeches of succesful businessmens in various fields in a one platform.

ಅನೇಕ ಬಾರಿ ನಾವು ಶುರುಮಾಡಿರುವ ಸ್ಟಾರ್ಟ್ ಅಪ್‌ಗಳು, ಬೆಳೆಸುತ್ತಿರುವ ಉದ್ದಿಮೆಗಳು ಕಠಿಣ ಪರಿಸ್ಥಿತಿಯನ್ನು ಹಾದುಹೋಗುವ ಸಂದರ್ಭ ಬರುತ್ತದೆ. ಆಗೆಲ್ಲಾ ಮಾನಸಿಕ ಸ್ಥೈರ್ಯ ಬಲುಮುಖ್ಯ. ಆರಂಭದಿಂದಲೂ ಅದನ್ನು ಅಳವಡಿಸಿಕೊಂಡು ಬೆಳೆಯುವುದು ಒಳ್ಳೆಯದು. ಹಾಗೆಂದೇ ಯುವಾಬ್ರಿಗೇಡ್ ಆಯೋಜಿಸುತ್ತಿರುವ ಕಾರ್ಯಕ್ರಮ The fifth Pillar – ಐದನೇ ಸ್ತಂಭ. ಉದ್ದಿಮೆಯೊಂದರ ಆರಂಭಕ್ಕೆ ಮತ್ತು ಅದರ ಬೆಳವಣಿಗೆಗೆ ನಾಲ್ಕು ಸ್ತಂಭಗಳು ಬೇಕೇ ಬೇಕು. ಮೊದಲನೆಯದು ಸ್ವತಃ ನೀವೇ. ಎರಡನೆಯದು ನಿಮ್ಮ ಉದ್ದಿಮೆಯ ಐಡಿಯಾ, ಮೂರನೆಯದು ನೀವು ಕಟ್ಟಿರುವ ತಂಡ ಮತ್ತು ನಾಲ್ಕನೆಯದು ನಿಮ್ಮ ಗ್ರಾಹಕ. ಇವೆಲ್ಲವೂ ಇದ್ದಾಗಲೂ ಸೋಲುವ ಪರಿಸ್ಥಿತಿ ಬರುವುದೇಕೆಂದರೆ ಪ್ರೇರಣೆ ಕೊಡಬಲ್ಲ, ಆಸರೆಯಾಗಿ ನಿಲ್ಲಬಲ್ಲ ಐದನೇ ಸ್ತಂಭದ ಕೊರತೆಯಿಂದಾಗಿ ಮಾತ್ರ. ಯುವಾಬ್ರಿಗೇಡ್ ಹೊಸ ಉದ್ದಿಮೆ ಆರಂಭಿಸಿರುವ ತರುಣರಿಗೆ ಹಾಗೆ ಹೆಗಲು ಕೊಟ್ಟು ನಿಲ್ಲುವ ಪ್ರಯತ್ನ ಮಾಡುತ್ತಿದೆ.

ಯುವಾ ಬ್ರಿಗೇಡ್ ಕರ್ನಾಟಕದಾದ್ಯಂತ ಆಯೋಜಿಸಿರುವ Fifth Pillar ಕಾರ್ಯಕ್ರಮಗಳು

  • ನವೆಂಬರ್ ೨೮ ೨೦೨೦ ರಂದು ನಡೆದ Fifth Pillar ಕಾರ್ಯಕ್ರಮ ಅವರ್ಸ್ ಸ್ಕೂಲ್, ಬೆಂಗಳೂರಿನಲ್ಲಿ ನಡೆಯಿತು. Nectar Fresh ನ ಸಂಸ್ಥಾಪಕರಾದ ಛಾಯಾ ನಂಜಪ್ಪ, Cheftalk ನ ಗೋವಿಂದ ಪೂಜಾರಿ, SRK Ladders ನ ಸಂಸ್ಥಾಪಕರಾದ ಕೇಶವ ಅಮೈ, ಮೀಡಿಯಾ ಮಾಸ್ಟರ್ಸ್ ನ ಎಂ ಎಸ್ ರಾಘವೇಂದ್ರ, Pierion services pvt ltd ನ ಗುರುನಾಥ್ ನರಸಿಂಹಮೂರ್ತಿ, ಖ್ಯಾತ ಆರ್ಥಿಕ ತಜ್ಞ ಎಸ್ ವಿಶ್ವನಾಥ್ ಭಟ್, brahmins warrior bakery ಯ ಆರ್ ಜಯತೀರ್ಥಾಚಾರ್ ಸವಾಲುಗಳನ್ನು ಮೆಟ್ಟಿ ತಮ್ಮ ಉದ್ಯಮದಲ್ಲಿ ಬೆಳೆದುನಿಂತ ಪರಿಯನ್ನು ಮಾತುಗಳಲ್ಲಿ ಹಂಚಿಕೊಂಡು ಸಭಿಕರಿಗೆ ಸ್ಫೂರ್ತಿ ತುಂಬಿದರು. ಯುವಾ ಬ್ರಿಗೇಡ್ ನ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮವನ್ನು ಮುನ್ನಡೆಸಿದರು.
  • ಕರೋನಾ ಒಬ್ಬ ವ್ಯಕ್ತಿಗೋ, ಒಂದು ರಾಷ್ಟ್ರಕ್ಕೆ ಮಾತ್ರವೋ ಬಂದಿರುವ ಆಪತ್ತಲ್ಲ. ಜಗತ್ತನ್ನೇ ಆವರಿಸಿಕೊಂಡಿರುವಂಥದ್ದು. ಅದನ್ನು ಎದುರಿಸಲು ಜೊತೆಯಾಗಬೇಕಿದೆ. ಪ್ರೇರಣೆ ಪಡೆದು, ಪ್ರೇರಣೆ ನೀಡುತ್ತಾ ಮುನ್ನಡೆಯಬೇಕಿದೆ.
    ಹಾಗಾಗಿ ಯುವಾ ಬ್ರಿಗೇಡ್ #FightBack ಎನ್ನುವ ಶೀರ್ಷಿಕೆಯಡಿಯಲ್ಲಿ corona ಸಂಕಷ್ಟ ಕಾಲದಲ್ಲೂ Fifth Pillar ಕಾರ್ಯಕ್ರಮ ಆಯೋಜಿಸಿತು.ಈ‌ ಬಾರಿಯ #FifthPillar ಎಲ್ಲರಿಂದಲೂ ಪ್ರಶಂಸೆಗೊಳಗಾಯ್ತು. ನೂರಾರು ಜನಕ್ಕೆ ಉದ್ಯೋಗ ಕೊಡಬಲ್ಲಂತಹ ಉದ್ಯಮಗಳು ಸಂಕಟದಲ್ಲಿದ್ದರೆ ಅದು ದುಃಖದಾಯಕ. ಹೀಗಾಗಿ ಉದ್ಯಮಿಗಳ ಸಹಕಾರಕ್ಕೆಂದು ವಿಶೇಷವಾಗಿ ಆಯೋಜಿಸಿದ್ದ ಕಾರ್ಯಕ್ರಮ ಅದು. ಖುದ್ದು ಕೈಗಾರಿಕಾ ಸಚಿವರೇ ಬಂದು ಈ ಸಂಕಟಗಳಿಗೆ ಪರಿಹಾರ ನೀಡುವ ಭರವಸೆಯ ಮಾತುಗಳನ್ನಾಡಿದ್ದು ಚೇತೋಹಾರಿಯಾಗಿತ್ತು. ಭಾಗವಹಿಸಿದ ಉದ್ಯಮಿಗಳು ಕರೋನಾದ ಸಂಕಷ್ಟದ ಕಾಲದಲ್ಲಿಯೂ ಗ್ರಾಹಕರನ್ನು ತಲುಪಲು ಮತ್ತು ತಮ್ಮ ಕಾರ್ಮಿಕರನ್ನು ನೋಡಿಕೊಳ್ಳಲು ನಡೆಸಿದ ಕ್ರಿಯಾತ್ಮಕ ಪ್ರಯೋಗಗಳ ವಿವರ ನಿಜಕ್ಕೂ ಪ್ರೇರಣೆ ನೀಡುವ ಸಂಗತಿಗಳು.
  • ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆದ #FifthPillar ಕಾರ್ಯಕ್ರಮ ತನ್ನ ಉದ್ದೇಶವನ್ನು ಸಾರ್ಥಕಗೊಳಿಸಿಕೊಂಡಿತು. ಬೆಳಿಗ್ಗೆ ಇಡಿಯ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ರಿಷಭ್ ಶೆಟ್ಟಿ ತನ್ನ ಬದುಕಿನ ಹಾದಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಲ್ಲದೆ ದೃಷ್ಟಿ ಗುರಿಯತ್ತ ನೆಟ್ಟಿದ್ದರೆ ಸಾಧನೆ ಕಷ್ಟವಲ್ಲ ಎಂದು ತನ್ನ ಬದುಕಿನ ಉದಾಹರಣೆಗಳಿಂದಲೇ ವಿವರಿಸಿದರು.
    ಅಧ್ಯಕ್ಷತೆ ವಹಿಸಿದ್ದ ಉಪಕುಲಪತಿಗಳಾದ ಶ್ರೀ ಕರಿಸಿದ್ದಪ್ಪನವರು ವಿದ್ಯಾರ್ಥಿಗಳಿಗೆ ಸ್ವಾವಲಂಬಿಯಾಗುವ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳಿದರು.
  • ೧೦-೦೮-೨೦೧೯ ರ Fifth Pillar ಕಾರ್ಯಕ್ರಮ ಬೆಂಗಳೂರಿನ BNMIT ಯಲ್ಲಿ ನಡೆಯಿತು. ಪಬ್ಲಿಕ್ ಟಿವಿಯ ರಂಗನಾಥ್ ಹಾಗೂ BNMIT ಯಾ ಮುಖ್ಯಸ್ಥರಾದ ನಾರಾಯಣ ರಾವ್ ಮಾನೆ ಉದ್ಘಾಟಿಸಿದರು. ಇಂಡಿಯಾ ಮನಿಯ ಸುಧೀರ್, ಸಿದ್ಧ ಆಹಾರ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ ಉದ್ಯಮಿ ಸದಾನಂದ ಮಯ್ಯ, ಯುನಿಕ್ ಡಿಟೆಕ್ಟಿವ್ ಅಂಡ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ.ಲಿಮಿಟೆಡ್ ನ ಲೆಫ್ಟಿನಂಟ್ ಕೆ.ಪಿ ನಾಗೇಶ್, ಬಿ.ಎಸ್.ಎಂ.ಕೆ ಅಂಡ್ ಅಸೋಸಿಯೇಟ್ಸ್ ನ ಚಾರ್ಟೆಡ್ ಅಕೌಂಟೆಂಟ್ ಮೋಹನ್ ಕುಮಾರ್, ಬಿಂದು ಪ್ಯಾಕ್ಡ್ ಡ್ರಿಂಕಿಂಗ್ ವಾಟರ್ ನ ಶಂಕರ್ ಭಟ್, ಸಾವಯವ ಮಂಡ್ಯದ ಮಧುಸೂದನ್, ಇಂದಿರಾ ಫುಡ್ ಪ್ರೈವೇಟ್ ನ ಸುಧೀನ್ ಶರ್ಮ, ವಿ-ಟೆಕ್ ಎಂಜಿನೀರ್ಸ್ ನ ವಿಶ್ವನಾಥ್ ಕುಂಟುವಳ್ಳಿ, ಮಿಕ್ಸ್ಚರ್ ನಾರಾಯಣ ಶೆಟ್ಟಿ ಮುಂತಾದವರು ತಮ್ಮ ಸ್ವಪ್ರಯತ್ನದಿಂದ ಉದ್ಯಮದಲ್ಲಿ ಯಶಸ್ಸುಗಳಿಸಿ ಅನುಭವದ ಮಾತುಗಳನ್ನಾಡಿ ನೆರೆದ ಸಭಿಕರಿಗೆ ಪ್ರೇರಣೆ ನೀಡಿದರು.

top