ಸ್ವಚ್ಛ ಭಾರತ-Swacch Bharath

ಸ್ವಚ್ಛ ಭಾರತ-Swacch Bharath

ಸ್ವಚ್ಛ, ಸುಂದರ ಭಾರತದ ಗುರಿಯತ್ತ ಯುವಾ ಬ್ರಿಗೇಡ್ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದಕ್ಕೆ ೨೦೨೧ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ತನ್ನೆಲ್ಲ ಇತರ ಕೆಲಸಗಳ ನಡುವೆಯೂ ಉದ್ಯಾನವನ, ರಾಜ್ಯಹೆದ್ದಾರಿ, ಸಮುದ್ರ ತೀರ, ಆಸ್ಪತ್ರೆ ಮುಂತಾದ ಕಡೆಗಳಲ್ಲಿ ನಡೆದ ಈ ಕೆಳಗಿನ ಸ್ವಚ್ಛತೆಯ ಕೆಲಸಗಳೇ ಸಾಕ್ಷಿ.

  • ಯುವಾ ಬ್ರಿಗೇಡ್ ಹಾವೇರಿ ವತಿಯಿಂದ ನಗರದ ಜೆ ಎಚ್ ಪಟೇಲ್ ವೃತ್ತದ ಬಳಿಯಿರುವ ಉದ್ಯಾನವನವನ್ನು ಎರಡು ಹಂತಗಳಲ್ಲಿ ಸ್ವಚ್ಛಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಯುವಾ ಬ್ರಿಗೇಡ್‌ನ ಕೆಲಸವನ್ನು ಶ್ಲಾಘಿಸಿದ ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಬೇಟಿ ನೀಡಿ ಪೂರ್ಣ ಪ್ರಮಾಣದ ಸ್ವಚ್ಛತೆ ಮತ್ತು ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆ ನಡೆಯದಂತೆ ಗಮನಹರಿಸುವುದಾಗಿ ಭರವಸೆ ನೀಡಿದರು.
  • ಯುವಾ ಬ್ರಿಗೇಡ್ ಸುಬ್ರಹ್ಮಣ್ಯ ವತಿಯಿಂದ ಸುಬ್ರಹ್ಮಣ್ಯ ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿರುವ ಕುಲ್ಕುಂದದ ಅರಣ್ಯ ಪ್ರದೇಶದ ಎದುರುಗಡೆ ಬೃಹತ್ ಸ್ವಚ್ಛತಾ ಆಂದೋಲನ ಎರಡು ಹಂತಗಳಲ್ಲಿ ನಡೆಯಿತು. ಈ ಕಾರ್ಯದಲ್ಲಿ ಅಖಿಲಾಭಾರತಿಯ ವಿದ್ಯಾರ್ಥಿ ಪರಿಷತ್, ಹಾಗೂ ಕುಲ್ಕುಂದದ ಸ್ಥಳೀಯ ಯುವಕರ ತಂಡ ಭಾಗವಹಿಸಿದ್ದರು. ಸುಮಾರು ಒಂದು ಲೋಡ್ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳನ್ನು ಆರಿಸಿ ತೆಗೆಯಲಾಯಿತು.
  • ಯುವಾ ಬ್ರಿಗೇಡ್ ಗಬ್ಬೂರು ವತಿಯಿಂದ ಊರಿನ ಹೆಬ್ಬಾಗಿಲಿನ ಬಳಿ ಸ್ವಚ್ಛತೆ ಮಾಡಲಾಯಿತು.
  • ಯುವಾ ಬ್ರಿಗೇಡ್ ಮಂಗಳೂರು ವತಿಯಿಂದ ಸಮುದ್ರದ ಕಿನಾರೆಯಲ್ಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಯಿತು.
  • ಯುವಾ ಬ್ರಿಗೇಡ್ ನಗರ್ಲೆ ವತಿಯಿಂದ ಸರ್ಕಾರಿ ಆಯುರ್ವೇದ ಚಿಕಿತ್ಸಾ ಕೇಂದ್ರದ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
top