Seva Kumbha-ಸೇವಾ ಕುಂಭ

Seva Kumbha-ಸೇವಾ ಕುಂಭ

“seva kumbha” program organised by yuva brigade to introduce the people who took service as worship in various fields. purpose of such program is to inspire people towards service activities.

ಸಮಾಜಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡು, ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುತ್ತಿರುವ ಹಲವಾರು ಅಪೂರ್ವ ವ್ಯಕ್ತಿಗಳ ಪರಿಚಯ, ಅವರ ಅನುಭವದ ಮಾತುಗಳು ಒಂದೇ ವೇದಿಕೆಯಲ್ಲಿ ದೊರಕುವಂತೆ ಮಾಡಿ ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಪ್ರೇರಣೆಯಾಗಲಿ ಎನ್ನುವ ಆಶಯದೊಂದಿಗೆ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಆಯೋಜಿಸಿರುವ ಕಾರ್ಯಕ್ರಮವೇ ಸೇವಾ ಕುಂಭ.

  • ಎರಡನೇ “ಸೇವಾ ಕುಂಭ” ಕಾರ್ಯಕ್ರಮ ಬಿ.ವಿ.ಬಿ ಕಾಲೇಜು, ವಿದ್ಯಾನಗರ, ಹುಬ್ಬಳ್ಳಿಯಲ್ಲಿ ಜರುಗಿತು, ಈ ಕಾರ್ಯಕ್ರಮದಲ್ಲಿ ಸುಮಾರು 82 ಸಂಘಟನೆಗಳ 157 ಜನ‌ ಪ್ರಮುಖರು ಒಂದೇ ಸೂರಿನಡಿ ಸೇರಿ ಸೇವಾಕ್ಷೇತ್ರದಲ್ಲೇ ಬದುಕು ಸವೆಸಿದವರ ಮಾರ್ಗದರ್ಶನ ಪಡೆದರು. ರಾಷ್ಟ್ರ ನಿರ್ಮಾಣದಲ್ಲಿ ಜೊತೆಗೂಡಿ ದುಡಿಯಬೇಕಿರುವ ತಮ್ಮ ಸಂಕಲ್ಪವನ್ನು ದೃಢಪಡಿಸಿಕೊಂಡರು.
    ಪದ್ಮಶ್ರೀ ಹರೇಕಳ ಹಾಜಬ್ಬರಿಂದ ಉದ್ಘಾಟನೆಗೊಂಡ ಕಾರ್ಯಕ್ರಮ ಬುಡಕಟ್ಟು ಜನಾಂಗದ ಸೇವೆಯಲ್ಲಿ ಬದುಕು ಸವೆಸಿದ ಶಾಂತಾರಾಮ ಸಿದ್ದಿಯವರ ಸಮಾರೋಪದ ನುಡಿಗಳೊಂದಿಗೆ ಸಂಪನ್ನಗೊಂಡಿತು. ಅನೇಕ ಸಾಧಕರು ತಮ್ಮ ಪರಿಚಯ ಮಾಡಿಕೊಂಡರಲ್ಲದೇ ಇತರರಿಗೆ ಪ್ರೇರಣೆಯಾದರು. ನೈಸರ್ಗಿಕ ವಿಷಮುಕ್ತ ಪದಾರ್ಥದ ಮಾರಾಟಕ್ಕೆ ವೇದಿಕೆಯೊಂದನ್ನು ರೂಪಿಸುವ ಭರವಸೆ ಗಾಯತ್ರಿ ತಪೋವನದವರಿಂದ ಸ್ಥಳದಲ್ಲೇ ದೊರೆತರೆ, ರಾಮಚಂದ್ರಜಿಯವರ ಬ್ರೈಲ್ ಪುಸ್ತಕಗಳನ್ನು ಎಲ್ಲಾ ಅಗತ್ಯವಿದ್ದವರಿಗೆ ತಲುಪಿಸುವ ವಿಶ್ವಾಸವನ್ನು ನೀಡಲಾಯ್ತು.
    92 ವರ್ಷದ ರಾಮಚಂದ್ರಜಿಯವರು ದೃಷ್ಟಿವಿಹೀನರಿಗಾಗಿ ಮಾಡುತ್ತಿರುವ ಕೆಲಸದ ಉತ್ಸಾಹವನ್ನು ಕಂಡು ತರುಣರಿಗಾಗಿಯೇ ನೀಡುವ ವಜ್ರಾಯುಧ ಸೇವಾ ಪ್ರಶಸ್ತಿಯನ್ನು ನೀಡಲಾಯ್ತು.
  • ಸೇವಾಕುಂಭದ ಮೊದಲನೇ ಕಾರ್ಯಕ್ರಮ ಶ್ರೀ ರಾಮ ಮಂದಿರ ಆಡಿಟೋರಿಯಂ, NR ಕಾಲೋನಿ, ಬಸವನಗುಡಿ, ಬೆಂಗಳೂರಿನಲ್ಲಿ ದಿನಾಂಕ:22 ಮತ್ತು 23 ಡಿಸೆಂಬರ್ 2018 ರಂದು ನಡೆಯಿತು. ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆಯಲ್ಲಿ ತೊಡಗಿಕೊಂಡಿರುವ ಸ್ವಾಮಿ ನಿತ್ಯಸ್ಥಾನಂದಜೀ, ಕಾಡಸಿದ್ದೇಶ್ವರ ಸ್ವಾಮೀಜಿ, ಸ್ವಾಮಿ ಸ್ವಾತ್ಮರಾಮಾನಂದಜೀ, ಸ್ವಾಮಿ ಅನುರಾಗಾನಂದಜೀ, ಸ್ವಾಮಿ ಜಪಾನಂದಜೀ, ಡಾ|| ಕರಿಸಿದ್ದಪ್ಪ, ಶ್ರೀ ನಾಗೇಶ್ ಡಾಕಪ್ಪ, ಶ್ರೀಮತಿ ಸೀತವ್ವ ಜೋಡಟ್ಟಿ, ಡಾ. ಮಂಜುನಾಥ್ ಎಲ್.ಎಚ್ , ಶ್ರೀಮತಿ ಮಾಲತಿ ಹೊಳ್ಳ, ಭಗಿನಿ ವನಿತಕ್ಕ, ಶ್ರೀ ನಾಗರಾಜ ಗಂಗೊಳ್ಳಿ, ಶ್ರೀ ಎನ್ ನಿತ್ಯಾನಂದ, ಶ್ರೀಮತಿ ಭವ್ಯಾರಾಣಿ, ಶ್ರೀ ವಿಜಯ್, ಪ್ರೊ ಗಂಗಾಧರ್ ಬಿ.ಎನ್, ಶ್ರೀ ರಾಜೇಶ್ ಭಟ್ ತಮ್ಮ ಅನುಭವದ ಮಾತುಗಳನ್ನಾಡಿ ಪ್ರೇರಣೆಯಾದರು.
    ಈ ಕೆಳಗಿನ ಲಿಂಕ್ ಉಪಯೋಗಿಸಿ ನೀವೂ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಸೇವಾ ಸಾಧಕರ ಮಾತುಗಳನ್ನು ಕೇಳಿ ಪ್ರೇರಣೆ ಪಡೆದುಕೊಳ್ಳಬಹುದು
  • https://www.youtube.com/watch?v=1G2JZyFR3Zk&list=PLz3uqvZr6BQPmphLk7ctoAJdVH9p1pj94&index=4

top