ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ

ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ

On the occasion of completing 75th year to independence day and 125th birth anniversary of netaji subhash chandra bose, Remembering Sacrifices of Many Great Freedom Fighters, with the program named “Summane baralilla swatantrya” hosted by chakravarti sulibele.

ಸ್ವಾತಂತ್ರ್ಯ ದೊರೆತು 75 ವಸಂತ ತುಂಬುತ್ತಿರುವ ಹಾಗೂ ಸುಭಾಷ್‌ಚಂದ್ರ ಬೋಸರ 125 ನೇ ಜಯಂತಿಯ ಹಿನ್ನೆಲೆಯಲ್ಲಿ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳುತ್ತಾ ಒಟ್ಟಾರೆ ಸ್ವಾತಂತ್ರ್ಯ ಹೋರಾಟವನ್ನು ಕಣ್ಮುಂದೆ ಕಟ್ಟಿಕೊಡುವ ಕಾರ್ಯಕ್ರಮವೇ “ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ” , ಯುವಾ ಬ್ರಿಗೇಡ್ ನ ಸಂಸ್ಥಾಪಕ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರು ಮೂರು ದಿನಗಳ ಕಾಲ ಧಾರವಾಡದ ಆಲೂರು ವೆಂಕಟರಾಯ ಸಭಾಭವನದಲ್ಲಿ #ಸುಮ್ಮನೆ_ಬರಲಿಲ್ಲ_ಸ್ವಾತಂತ್ರ್ಯ ಎಂಬ ಸರಣಿ ಉಪನ್ಯಾಸ ನಡೆಸಿಕೊಟ್ಟರು. ಕೆ.ಎಲ್.ಇ ಆಡಳಿತ ಮಂಡಳಿ ಬೆಳಗಾವಿಯ ನಿರ್ದೇಶಕರಾದ ಶ್ರೀ ಶಂಕರಣ್ಣ ಮುನವಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಾಬಣ್ಣ ತಳವಾರ ಸಮಾರೋಪದ ನುಡಿಗಳನ್ನಾಡಿದರು.

top