ಸಾಮರಸ್ಯಕ್ಕಾಗಿ ಕಪಿಲಾರತಿ

ಸಾಮರಸ್ಯಕ್ಕಾಗಿ ಕಪಿಲಾರತಿ

ನಾಗರೀಕತೆ ಉಗಮಗೊಂಡದ್ದು ಮತ್ತು ನೆಲೆಯೂರಿರುವುದು ನದಿ ತಟಗಳಲ್ಲಿಯೇ. ನದಿಗಳನ್ನು ಉಳಿಸಿಕೊಂಡರೆ ನಮ್ಮ ನಾಗರೀಕತೆ ಸುದೀರ್ಘ ಕಾಲ ಉಳಿಯುತ್ತದೆ. ಹಾಗೆಂದೆ ಯುವಾ ಬ್ರಿಗೇಡ್ ಕಳೆದ 5 ವರ್ಷಗಳಿಂದ ನದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದೆ. ನಂಜನಗೂಡಿನಲ್ಲಿರುವ ಕಪಿಲಾ ನದಿ ಮತ್ತು ಅಲ್ಲಿನ ಸ್ನಾನ ಘಟ್ಟಗಳನ್ನು ಸ್ವಚ್ಚ ಮಾಡಿ ಆರತಿ ಮಾಡುವುದು ಯುವಾ ಬ್ರಿಗೇಡ್ ನಡೆಸಿಕೊಂಡು ಬಂದಿರುವ ಪದ್ಧತಿ.

ಈ ಬಾರಿಯ ಕಪಿಲಾ ಆರತಿ ಸಾಮರಸ್ಯವನ್ನು ಸಾರುವಂಥದ್ದು. ಭಿನ್ನ ಭಿನ್ನ ಮಠಗಳ ಐವರು ಪೀಠಾಧೀಶರು ಆರತಿಯಲ್ಲಿ ಭಾಗವಗಿಸಿ ವಿವಿಧ ಕ್ಷೇತ್ರಗಳಿಂದ ತಂದಿದ್ದ ತೀರ್ಥ ಸಮರ್ಪಣೆ ಮಾಡಿದರು. ಹದಿನಾರು ಕಂಬದ ಮಂಟಪದಲ್ಲಿ ಶಿವನ ಲಿಂಗಕ್ಕೆ ಅಭೀಷೇಕವನ್ನು ಮಾಡಿ, ದೋಣಿಯ ಮೂಲಕ ಅತಿಥಿಗಳು ನದಿಯ ಮಧ್ಯೆ ನಿರ್ಮಿಸಿದ್ದ ವೇದಿಗೆ ಬಂದರು. ನದಿಯ ದಡದುದ್ದಕ್ಕೂ ಬೆಳಗಿದ ದೀಪಗಳು ಮತ್ತು ಕಪಿಲೆಗೆ ಬೆಳಗಿದ ಆರತಿ ವೈಭವಪೂರ್ವವಾಗಿತ್ತು. ನೆರೆದಿದ್ದವರ ಮನಮೋಹಿಸಿಬಿಟ್ಟಿತು. ಸುಮಾರು 75 ಸಾವಿರ ದೀಪಗಳು ಅಥಿತಿಗಳು ಹೊರಟ ನಂತರವೂ ಆನಂದದಿಂದ ಬೆಳಗುತ್ತಿದ್ದವು.

ಎಲ್ಲಾ ನದಿಗಳು ಹರಿದು ಸಾಗರವನ್ನು ಸೇರುವಂತೆ ನಮ್ಮ ನಡುವೆ ಇರುವ ಎಲ್ಲಾ ಜಾತಿ, ಮತ, ಪಂಥವನ್ನು ಒಂದೆಡೆ ಬೆಸೆಯುವುದೇ ಹಿಂದೂ ಧರ್ಮ. ನದಿಯನ್ನು ಮಲಿನಗೊಳಿಸದೇ ಸ್ವಚ್ಚವಾಗಿರಿಸಿಕೊಳ್ಳುವುದು ಎಲ್ಲಾ ಸ್ವಾಮೀಜೀಗಳ ಆಶಯವಾಗಿತ್ತು. ನದಿಯನ್ನು ಸ್ವಚ್ಛವಾಗಿರಿಸಿಕೊಳ್ಳುವಂತಹ, ಕೊಳಕು ಮಾಡಬಾರದು ಎಂಬ ಪ್ರತಿಜ್ಞಾ ವಿಧಿಯನ್ನು ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮೀಜೀ (ಭೋವಿ ಗುರುಪೀಠ, ಚಿತ್ರದುರ್ಗ) ನೆರೆದಿದ್ದ ಜನಸಮೂಹಕ್ಕೆ ಬೋಧಿಸಿದರು.

Comments:

  • Likith krishna G

    ಒಂದು ಒಳ್ಳೆಯ ಪ್ರಯತ್ನ ಜನರನ್ನು ಒಗ್ಗೂಡಿಸಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಂತೆ ಮಾಡುವುದು ನಿಜಕ್ಕೂ ಒಳ್ಳೆಯ ಪ್ರಯತ್ನ

Comments are closed.

top