ಸಮುದ್ರ ಸ್ನಾನ

ಸಮುದ್ರ ಸ್ನಾನ

Its our duty to keep clean in surrounding places, So volunteers of mangaluru yuva brigade team decided to clean beech near tanneeru bavi. samudra snana is the name given to this program

ನಮ್ಮ ಊರು, ನೆಲ, ಜಲ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮದ್ದೇ ಜವಾಬ್ದಾರಿ, ಮಂಗಳೂರಿನ ಯುವಾ ಬ್ರಿಗೇಡ್ ನ ಕಾರ್ಯಕರ್ತರು ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಲು “ಸಮುದ್ರ ಸ್ನಾನ” ಎನ್ನುವ ಹೆಸರಿನಲ್ಲಿ ಮಂಗಳೂರಿನ ತಣ್ಣೀರುಬಾವಿಯಲ್ಲಿ ಬಹುವಾರಗಳ ಸಮುದ್ರ ಸ್ವಚ್ಛತೆಯನ್ನು ಇನ್ನಿತರ ಸಮಾನಮನಸ್ಕ ಸೇವಾ ಸಂಘಟನೆಗಳ ಸಹಭಾಗಿತ್ವದೊಂದಿಗೆ ದಿನಾಂಕ ೧೫-೧೧-೨೦೨೦ ರಂದು ಪ್ರಾರಂಭಿಸಿದರು. ಮೊದಲ ವಾರ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರು ಈ ಕಾರ್ಯದಲ್ಲಿ ಭಾಗವಹಿಸಿದ್ದು ತಣ್ಣೀರು ಬಾವಿ ಬೀಚ್‌ನ ಬಳಿ ದೊಡ್ಡ ಪ್ರಮಾಣದ ಕಸ ಸಂಗ್ರಹಿಸಿದರು.
ಐದನೇ ವಾರದ ಸ್ವಚ್ಛತೆಯಲ್ಲಿ ತುಳು ಚಲನಚಿತ್ರ “ಪೆಪ್ಪೆರೆರೆ ಪೆರೆರೆ” ತಂಡ ಹಾಗೂ #ನಮ್ಮೊಳಗಿನ_ಸೈನಿಕರು ತಂಡ ಸ್ವಚ್ಛತೆಯಲ್ಲಿ ಜೊತೆಯಾದರು. ಈ ಸ್ವಚ್ಛತಾ ಕಾರ್ಯ ಸತತ ಆರು ವಾರಗಳವರೆಗೆ ನಡೆದು ಭಾರೀ ಪ್ರಮಾಣದ ಕಸವನ್ನು ಕಾರ್ಯಕರ್ತರು ಸಂಗ್ರಹಿಸಿ ಸಮಾಜಕ್ಕೆ ಮಾದರಿಯಾದರು.‌

top