ಶಕ್ತಿಮಾನ್- Shaktiman

ಶಕ್ತಿಮಾನ್- Shaktiman

Yuva brigade celebrating Feb 14th as nation lovers day from 7 years, On feb 14th of 2020 by calling power men as “shaktiman” Yuva brigade decided to honour their hard work.
ಯುವಾಬ್ರಿಗೇಡ್ ಈ ಪ್ರೇಮಿಗಳ ದಿನವನ್ನು ದೇಶಪ್ರೇಮಿಗಳ ದಿನವಾಗಿಸಿ ಇದು ಆರನೇ ವರ್ಷ. ಈ ಹಿಂದೆ ಇದೇ ದಿನ ನಾವು ವೃದ್ಧಾಶ್ರಮಗಳಿಗೆ ಹೋಗಿದ್ದು, ಪೌರ ಕಾರ್ಮಿಕರು ವಾಸಿಸುವ ಪ್ರದೇಶವನ್ನು ಸ್ವಚ್ಛ ಮಾಡಿದ್ದು, ಪೊಲೀಸರನ್ನು ನಮ್ಮೊಳಗಿನ ಸೈನಿಕರೆಂದು ಗೌರವಿಸಿದ್ದು ನೆನಪಿನಲ್ಲಿ ಹಸಿಯಾಗಿದೆ. ಈ ಬಾರಿ ನಾವು ನಮ್ಮನ್ನು ಸದಾ ಬೆಳಕಿನಲ್ಲಿಡಲು ಪ್ರಾಣದ ಹಂಗನ್ನು ತೊರೆದು ದುಡಿಯುವ ಪವರ್‌ಮನ್‌ಗಳಿಗೆ ಗೌರವ ಸಮರ್ಪಿಸಲಿದ್ದೇವೆ‌. ದಿನಾಂಕ ೧೪-೦೨-೨೦೨೦ರ ಈ ಕಾರ್ಯಕ್ರಮವನ್ನು ನಾವು ‘ಶಕ್ತಿಮಾನ್’ ಎಂದು ಕರೆದಿದ್ದೇವೆ. ಶಕ್ತಿಯೊಂದಿಗೆ ಸಾಹಸದ ಆಟವಾಡುವ ಸಾಹಸಿಗನಲ್ಲವೇ ಆತ. ನಮ್ಮೂರಿನ ವಿದ್ಯುತ್ ಕಛೇರಿಗಳಿಗೆ ಹೋಗಿ ಅಲ್ಲಿರುವ ಈ ಶಕ್ತಿಮಾನ್‌ಗಳನ್ನು ಗುರುತಿಸಿ ಅವರೆಲ್ಲರಿಗೂ ಸೇರಿ ಒಂದು ಫಲಕವನ್ನು ಕೊಟ್ಟು ಗೌರವಿಸುವ ಕಾರ್ಯಕ್ರಮವಿದು.

ರಾಜ್ಯದಾದ್ಯಂತ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದವರು ಹಮ್ಮಿಕೊಂಡ ಕಾರ್ಯಕ್ರಮಗಳು

  • ಯುವಾ ಬ್ರಿಗೇಡ್ ವತಿಯಿಂದ ಬೆಳಗಾವಿ ಜಿಲ್ಲೆ ಗೋಕಾಕ್ ನಗರದ ವಿದ್ಯುತ್ ಸರಬರಾಜು ವಿಭಾಗ ಕೇಂದ್ರ, ತೋರಣಗಲ್ಲು ಪಟ್ಟಣ, ಮುನವಳ್ಳಿ ಗ್ರಾಮದ ವಿದ್ಯುತ್ ಸರಬರಾಜು ಕೇಂದ್ರ, ಸಂಕೇಶ್ವರದ ವಿದ್ಯುತ್ ಸರಬರಾಜು ಕೇಂದ್ರ,ಅಥಣಿ ತಾಲ್ಲೂಕಿನ ಐಗಳಿ ವಿದ್ಯುತ್ ಸರಬರಾಜು ಕೇಂದ್ರ, ಅಥಣಿ ತಾಲ್ಲೂಕಿನ ಜಂಬಗಿ ವಿದ್ಯುತ್ ಸರಬರಾಜು ಕೇಂದ್ರ, ಅಥಣಿ ತಾಲ್ಲೂಕಿನ ಕೊಕಟನೂರ ವಿದ್ಯುತ್ ಸರಬರಾಜು ಕೇಂದ್ರದ ಶಾಖಾ ಕಛೇರಿ, ಅಥಣಿ ತಾಲ್ಲೂಕಿನ ಉಗಾರ ಕುರ್ದ್ ಗ್ರಾಮ, ರಾಮದುರ್ಗ ತಾಲ್ಲೂಕಿನ ನಗರ, ಗ್ರಾಮೀಣ, ಕಟಕೋಳ, ಸಾಲಹಳ್ಳಿ, ಸರೇಭಾನ, ಯರಗಟ್ಟಿ, ಬಟಕುರ್ಕಿ ವಿದ್ಯುತ್ ಉಪ ವಿಭಾಗ, ಅಥಣಿ ತಾಲ್ಲೂಕಿನ ದರೂರು ವಿದ್ಯುತ್ ಸರಬರಾಜು ಕೇಂದ್ರದ ಶಾಖಾ ಕಛೇರಿ, ಅಥಣಿ ತಾಲ್ಲೂಕಿನ ಸತ್ತಿ ವಿದ್ಯುತ್ ಸರಬರಾಜು ಕೇಂದ್ರ, ಅಥಣಿ ತಾಲ್ಲೂಕಿನ ತೆಲಸಂಗ ವಿದ್ಯುತ್ ಸರಬರಾಜು ಕೇಂದ್ರದ ಶಾಖಾ ಕಛೇರಿ, ಅಥಣಿ ನಗರ ಮತ್ತು ಗ್ರಾಮಾಂತರ ವಿದ್ಯುತ್ ಸರಬರಾಜು ಕೇಂದ್ರ, ಸವದತ್ತಿ ನಗರದ ವಿದ್ಯುತ್ ಸರಬರಾಜು ವಿಭಾಗ ಕೇಂದ್ರ, ಮೂಡಲಿಗಿ ಪಟ್ಟಣದ ವಿದ್ಯುತ್ ಸರಬರಾಜು ಕೇಂದ್ರ, ಹಿಡ್ಕಲ್ ಜಲಾಶಯದ ವಿದ್ಯುತ್ ಸರಬರಾಜು ಉಪ ವಿಭಾಗ ಕೇಂದ್ರ,ಅಥಣಿ ತಾಲ್ಲೂಕಿನ ಕಾಗವಾಡದ ವಿದ್ಯುತ್ ಸರಬರಾಜು ಕೇಂದ್ರದ ಶಾಖಾ ಕಛೇರಿ ಮುಂತಾದ ೫೧ ಕಡೆಗಳಲ್ಲಿ ನೂರಾರು “ಪವರ್ ಮ್ಯಾನ್”ಗಳಿಗೆ ಗೌರವ ಸನ್ಮಾನ ಮಾಡಲಾಯಿತು.
  • ಯುವಾ ಬ್ರಿಗೇಡ್ ವತಿಯಿಂದ ಕೊಪ್ಪಳ ಜಿಲ್ಲೆ ತಾವರಗೆರೆ ವಿದ್ಯುತ್ ಸರಬರಾಜು ಕೇಂದ್ರ, ಯಾದವಾಡ, ಕುಲಗೋಡ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕೇಂದ್ರ, ಎಚ್.ಡಿ.ಕೋಟೆ ತಾಲ್ಲೂಕಿನ ಸರಗೂರು ಗ್ರಾಮದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ತುಮಕೂರು ಜಿಲ್ಲೆ‌ ಕೊರಟಗೆರೆ, ಮೈಸೂರು ಜಿಲ್ಲೆಯ ತಿ.ನರಸೀಪುರ ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಧಾರವಾಡ ಜಿಲ್ಲೆ ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಸುಳ್ಯ ತಾಲ್ಲೂಕಿನ ನಗರ ವಿದ್ಯುತ್ ಉಪ ವಿಭಾಗ, ರಾಯಚೂರು ಜಿಲ್ಲೆ ಸಿರಿವಾರ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ರಾಯಚೂರು ಜಿಲ್ಲೆ‌ ಕಲ್ಮಲಾ, ಹುನಗುಂದದ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಚಿತ್ರದುರ್ಗ ನಗರದ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಕಾಗಿನೆಲೆ ವಿದ್ಯುತ್ ಸರಬರಾಜು ಕೇಂದ್ರ, ದಾವಣಗೆರೆ ಜಿಲ್ಲೆಯ ನ್ಯಾಮತಿಯ ವಿದ್ಯುತ್ ಸರಬರಾಜು ಕೇಂದ್ರದ ಶಾಖಾ ಕಛೇರಿ, ಹಾವೇರಿ ಜಿಲ್ಲೆ ಹೊಸರಿತ್ತಿಯ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಉತ್ತರಕನ್ನಡ ಜಿಲ್ಲೆಯ ಕುಮಟಾ, ಜೋಯಿಡಾ ವಲಯ, ಶಿರಸಿ ಪಟ್ಟಣದ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಮಂಗಳೂರು ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಕೋಲಾರ, ಮಂಗಳೂರು, ಸಿಂಧನೂರು, ರಾಣಿಬೆನ್ನೂರು, ಬೀದರ್, ಹುಬ್ಬಳ್ಳಿ- ಧಾರವಾಡ ವಿದ್ಯುತ್ ಸರಬರಾಜು ಸಂಸ್ಥೆಯ ೬ ಘಟಕಗಳು, ಸುಳ್ಯ ತಾಲ್ಲೂಕಿನ ಬೆಳ್ಳಾರೆ ವಿದ್ಯುತ್ ಉಪ ವಿಭಾಗ, ದಕ್ಷಿಣಕನ್ನಡ ಜಿಲ್ಲೆ ಸುಬ್ರಹ್ಮಣ್ಯ ದ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಉಡುಪಿ, ಕುಂದಾಪುರ, ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ವಿದ್ಯುತ್ ಸರಬರಾಜು ಕೇಂದ್ರದ ಶಾಖಾ ಕಛೇರಿ, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಗದಗ ಜಿಲ್ಲೆಯ ನರೇಗಲ್ ವಿದ್ಯುತ್ ಸರಬರಾಜು ಉಪ ವಿಭಾಗ ಕೇಂದ್ರ, ಕಂಪ್ಲಿ ತಾಲ್ಲೂಕಿನ ವಿದ್ಯುತ್ ಪ್ರಸರಣ ನಿಗಮದ ಶಾಖಾ ಕಛೇರಿರಾಮನಗರ, ಗುಡಿಬಂಡೆ ಪಟ್ಟಣದ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಕೊಪ್ಪಳ ನಗರದ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ ಮುಂತಾದ ಹಲವಾರು ಭಾಗಗಳಲ್ಲಿ “ಪವರ್ ಮ್ಯಾನ್”ಗಳಿಗೆ ಗೌರವ ಸನ್ಮಾನ ಮಾಡಲಾಯಿತು.
  • ಯುವಾ ಬ್ರಿಗೇಡ್ ವತಿಯಿಂದ ಬಾಗಲಕೋಟೆ ಪಟ್ಟಣದ ಉಪ ವಿಭಾಗ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಅಮೀನ್ ಗಡದ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಕಾತರಕಿ ಪಟ್ಟಣದ ವಿದ್ಯುತ್ ಸರಬರಾಜು ಕೇಂದ್ರ, ನವನಗರದ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ತೇರದಾಳದ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿ, ಜಮಖಂಡಿ ಪಟ್ಟಣದ ವಿದ್ಯುತ್ ಸರಬರಾಜು ಕೇಂದ್ರದ ಕಛೇರಿಯಲ್ಲಿ “ಪವರ್ ಮ್ಯಾನ್”ಗಳಿಗೆ ಗೌರವ ಸನ್ಮಾನ ಮಾಡಲಾಯಿತು.
top