ವೀರ ಕೇಸರಿ-Veera Kesari

ವೀರ ಕೇಸರಿ-Veera Kesari

127 ವರ್ಷಗಳ ಹಿಂದೆ ಸ್ವಾಮಿ‌ ವಿವೇಕಾನಂದರು‌ ಹಿಂದೂಧರ್ಮದ ಪ್ರತಿನಿಧಿಯಾಗಿ ಭಾಷಣ ಮಾಡಿದ ದಿಗ್ವಿಜಯ ದಿನದ ಸವಿ ನೆನಪಿಗಾಗಿ ಈ ವರ್ಷ (11-09-2020) ಮನೆ ಮನೆಗೂ ವಿವೇಕಾನಂದರನ್ನು ಮುಟ್ಟಿಸುವ ವೀರಕೇಸರಿ ಯೋಜನೆಯನ್ನು ಯುವಾಬ್ರಿಗೇಡ್ ಕೈಗೆತ್ತಿಕೊಂಡಿತ್ತು. ವಿವೇಕಾನಂದರ ಒಂದು ಪುಸ್ತಕ, ಜೊತೆಗೆ ಮನೆಯ ಬಾಗಿಲ ಮೇಲೆ ವಿವೇಕಾನಂದರ ಹೇಳಿಕೆಯುಳ್ಳ ಸ್ಟಿಕ್ಕರ್ ಒಂದನ್ನು ಹಚ್ಚುವ ಮಹಾ ಅಭಿಯಾನವಿದು. ಭಾರತದ ಪುನರ್ ನಿರ್ಮಾಣದ ಈ ಹೊತ್ತಲ್ಲಿ‌ ಯುವಕರೊಳಗೆ ವಿವೇಕಾನಂದರು ಮತ್ತೊಮ್ಮೆ ಪ್ರವಹಿಸುವುದು ಚೈತನ್ಯದಾಯಕವೇ ಸರಿ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ, ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ, ವಿಜಯಪುರ, ಕಲಬುರ್ಗಿ, ಯಾದಗಿರಿ, ಬೀದರ್ ನ ವಿವಿಧ ಭಾಗಗಳಲ್ಲಿ 15000 ಕ್ಕೂ ಹೆಚ್ಚಿನ ಮನೆಗಳಿಗೆ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಲುಪಿಸಲಾಯಿತು.

top