ವೀರ್ ಭಾರತ್-Veer Bharath

ವೀರ್ ಭಾರತ್-Veer Bharath

ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ “ವೀರ್ ಭಾರತ್-ಗುರಿಯತ್ತ ನಡೆ” ಎನ್ನುವ ಶೀರ್ಷಿಕೆಯುಳ್ಳ ಪಾದಯಾತ್ರೆ ನಡೆಸಿತು.
ರಾಜ್ಯದ 28 ಜಿಲ್ಲೆಯ 731 ಹಳ್ಳಿಗಳನ್ನು 3 ದಿನಗಳ ಅವಧಿಯಲ್ಲಿ 776 ಕಾರ್ಯಕರ್ತರು 1650 ಕಿ.ಮೀ ದೂರ ಕ್ರಮಿಸುವ ಮೂಲಕ ಸಂಪರ್ಕಿಸಿದ್ದಾರೆ. ಮಂಗಳೂರು 5 ತಾಲೂಕುಗಳಲ್ಲಿ ಪಾದಯಾತ್ರೆ ನಡೆಸಿದರೆ, ಕಲ್ಬುರ್ಗಿ ಮತ್ತು ಉತ್ತರ ಕನ್ನಡಗಳು ನಾಲ್ಕು ತಾಲೂಕುಗಳಲ್ಲಿ ಕಾರ್ಯಕರ್ತರ ಮೂಲಕ ಹಳ್ಳಿಗಳನ್ನು ಸಂಪರ್ಕಿಸಿದೆ. 60 ಕ್ಕೂ ಹೆಚ್ಚು ತರುಣರ ಮೂಲಕ ಚಾಮರಾಜನಗರ ಪಾದಯಾತ್ರೆಗೆ ರಂಗೇರಿಸಿದರೆ ಬೆಂಗಳೂರು ಜಿಲ್ಲೆ ವಿಶಿಷ್ಟ ರಥದ ಮೂಲಕ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಬಾಗಲಕೋಟೆಯವರು ವಿವೇಕಾನಂದರ ಪಟವನ್ನು ಸೈಕಲ್ಲಿನ ಮೇಲಿಟ್ಟುಕೊಂಡು ಅದನ್ನು ರಥವಾಗಿಸಿದರೆ ಚಿಕ್ಕಮಗಳೂರಿನವರು ಅತ್ಯಂತ ವಿಶಿಷ್ಟವಾಗಿ ರಥವನ್ನು ಎಳೆದೊಯ್ಯುವ ಮೂಲಕ ದಾರಿಯುದ್ದಕ್ಕೂ ಜನರನ್ನು ಸೆಳೆಯುತ್ತಿದ್ದರು. ಬಹುತೇಕ ಜಿಲ್ಲೆಗಳ ಕಾರ್ಯಕರ್ತರು ಪ್ರತಿದಿನವೂ 30 ಕಿ.ಮೀನಷ್ಟು ಪಾದಯಾತ್ರೆ ಮಾಡಿದ್ದು ವಿಶೇಷವಾಗಿತ್ತು. ಯಾತ್ರೆಯುದ್ದಕ್ಕೂ ಗ್ರಾಮದ ಅಭಿವೃದ್ಧಿಯ ಕುರಿತಂತೆ ಸಂದೇಶವನ್ನು ತಲುಪಿಸಿದ್ದಲ್ಲದೇ ಮತಾಂತರದ ಚರ್ಚೆಯನ್ನು ತಂದು ಧರ್ಮಜಾಗೃತಿ ಮಾಡಲಾಯ್ತು. ವಿವೇಕಾನಂದರ ಸಂದೇಶವನ್ನು ಬಿತ್ತುವ ಸುಮಾರು ಒಂದು ಲಕ್ಷ ಕರಪತ್ರವನ್ನು ಸಮಾಜಕ್ಕೆ ಮುಟ್ಟಿಸಲಾಯ್ತು.
ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತೆಯರು ಹಿಂದೆ ಬೀಳಲಿಲ್ಲ. ಆರು ಜಿಲ್ಲೆಗಳಲ್ಲಿ ಪ್ರತಿಷ್ಠಾನದ 50 ಕಾರ್ಯಕರ್ತೆಯರು 65 ಕಿ.ಮೀ ಕ್ರಮಿಸುವ ಮೂಲಕ 20 ಹಳ್ಳಿಗಳನ್ನು ಸಂಪರ್ಕಿಸಿ ತಮ್ಮ ಪಾಲಿನ ಕಾಣಿಕೆಯನ್ನು ವಿವೇಕಾನಂದರಿಗೆ ಸಮರ್ಪಿಸಿದರು.
ಒಟ್ಟಾರೆ ಈ ಯಾತ್ರೆ ಅಭೂತಪೂರ್ವ ಅನುಭವವನ್ನು ಕೊಟ್ಟಿತು. ಈ ಬಾರಿ ಕನ್ಯಾಕುಮಾರಿಯ ಯಾತ್ರೆಯ ವೇಳೆಗೆ ನಾವು ಚರ್ಚಿಸಲೇಬೇಕಾದ ಮುಖ್ಯ ಅಂಶಗಳಲ್ಲಿ ಇದೂ ಒಂದು. ಗ್ರಾಮ-ಗ್ರಾಮಗಳಲ್ಲಿ ಯುವಾಬ್ರಿಗೇಡ್‌ನ ವಿಸ್ತಾರಕ್ಕೆ ಈ ಯಾತ್ರೆ ಖಂಡಿತವಾಗಿಯೂ ಸಹಕರಿಸಿದೆ.

top