ವಿವೇಕ ಮಾಲೆ

ವಿವೇಕ ಮಾಲೆ

25th of December celebrated as “Rock day”. On which swami vivekananda meditated on the rock of kanyakumari, every year on this occasion yuva brigade celebrating event “viveka maale”, Which is to take resolution by youth to walk a step towards “Muscle of iron, nerves of steel and minds like thunderbolt” that was the wish on youth which swamiji had.

ಡಿಸೆಂಬರ್ ೨೫, ಸ್ವಾಮಿ ವಿವೇಕಾನಂದರು ಭಾರತದ ಉದ್ಧಾರಕ್ಕಾಗಿ ಕನ್ಯಾಕುಮಾರಿ ಬಂಡೆಯ ಮೇಲೆ ೩ ದಿನಗಳ ಕಾಲ ಕಣ್ಣೀರು ಸುರಿಸುತ್ತಾ ಧ್ಯಾನಸ್ಥರಾಗಿ ಕುಳಿತ ದಿನವನ್ನು ಯುವಾ ಬ್ರಿಗೇಡ್ “ರಾಕ್ ಡೇ” ಎಂದು ಆಚರಿಸುವುದಲ್ಲದೆ ವಿವೇಕಾಮಾಲೆ ಧರಿಸಿ ವ್ಯಾಯಾಮ, ವಿವೇಕ ಸಾಹಿತ್ಯದ ಅಧ್ಯಯನದ ಮೂಲಕ ವಿವೇಕಾನಂದರು ಬಯಸಿದ್ದ ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ ಮತ್ತು ಮಿಂಚಿನ ಇಚ್ಚಾ ಶಕ್ತಿ ಹೊಂದಿದ ತರುಣರಾಗಲು ಪ್ರಯತ್ನ ಮಾಡಲಾಗುತ್ತದೆ.
ಡಿಸೆಂಬರ್ ೨೫, ೨೦೨೦ ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ,ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಹಾವೇರಿ, ಬಾಗಲಕೋಟೆ, ಗದಗ, ಭಾಲ್ಕಿ,ಬೆಳಗಾವಿ, ಬೀದರ್, ಕೊಪ್ಪಳ, ರಾಯಚೂರು, ಚಿತ್ರದುರ್ಗ, ಬಳ್ಳಾರಿ, ವಿಜಯಪುರ, ಕಲಬುರ್ಗಿ, ಯಾದಗಿರಿಯ ಬೇರೆ ಬೇರೆ ಭಾಗಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಯುವಕರು ವಿವೇಕಮಾಲೆಯನ್ನು ಧರಿಸಿ ಸ್ವಾಮಿ ವಿವೇಕಾನಂದರು ಬಯಸಿದ್ದ ಆದರ್ಶ ಯುವಕರಾಗುವ ಕಡೆಗೆ ಹೆಜ್ಜೆ ಹಾಕಿದರು.

top