ಯೋಧ ಹಬ್ಬ

ಯೋಧ ಹಬ್ಬ

march 15,birth annivarsary of major sandeep unnikrishnan who sacrified his life after fighting with the group of terrorist. later he is honoured by shourya chakra award for his bravery. “yodha habba” is the program organised by yuva brigade on march 15 to remember sacrifice of major sandeep unnikrishnan .

march 15, ಭಯೋತ್ಪಾದಕರನ್ನು ಸದೆಬಡಿಯುತ್ತಾ ವೀರಮರಣ ಪಡೆದ ಹೆಮ್ಮೆಯ ಕನ್ನಡಿಗ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರು ಹುಟ್ಟಿದ ದಿನ.

ಯೋಧ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮಗಳು

  • ಮೇಜರ್ ಸಂದೀಪ್ ಉನ್ನಿಕೃಷ್ಣನ್‌ರ ಈ ಸಲದ ಹುಟ್ಟಿದ ಹಬ್ಬವನ್ನು ಸ್ವಲ್ಪ ವಿಶೇಷವಾಗಿರಲಿ ಅಂತ ಈ ಬಾರಿ ಹುಟ್ಟಿದ ಹಬ್ಬಕ್ಕೂ ಎರಡು ದಿನ ಮುನ್ನ ಮೇಜರ್ ಸಂದೀಪ್ ಅವರ ತಂದೆ-ತಾಯಿಯವರನ್ನು ನಂಜನಗೂಡಿಗೆ ಕರೆದೊಯ್ದು ಅಲ್ಲಿಯೇ ಕಾರ್ಯಕ್ರಮ ಮಾಡಲಾಯಿತು. ಐವರು ಹುತಾತ್ಮ ಯೋಧರ ತಂದೆ-ತಾಯಿಯರನ್ನು ಗೌರವಿಸುವ ಅವಕಾಶವಿತ್ತಲ್ಲದೇ; ಕಣ್ಣುಗಳನ್ನು ಕಳೆದುಕೊಂಡ ನಂತರವೂ ಅಂತರ್ದೃಷ್ಟಿಯಿಂದಲೇ ಬೆಳಗಿದ, ‘ಎದ್ದುನಿಲ್ಲು ವೀರ’ ಹಾಡಿನ ಜನಕರಾದ ವೇಣುಜಿಯವರ ಮಾತುಗಳನ್ನು ಕೇಳುವ ಅವಕಾಶವೂ ಸಿಕ್ಕಿತು. ನೆರೆದಿದ್ದ ಜನರನ್ನುದ್ದೇಶಿಸಿ ಸಂದೀಪ್ ಅವರ ತಂದೆ-ತಾಯಿಯರೂ ಮಾತನಾಡಿದರು. ಈ ಹೊತ್ತಲ್ಲಿ ವಿಶೇಷ ಪ್ರದರ್ಶಿನಿಯನ್ನು ಏರ್ಪಡಿಸಲಾಗಿದ್ದು ಅದರಲ್ಲಿ ಸೈನ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳಲ್ಲದೇ ಹುತಾತ್ಮ ಸೈನಿಕರ ಬಟ್ಟೆ, ಪ್ರಶಸ್ತಿಗಳನ್ನು ಇಡಲಾಗಿತ್ತು. ನೂರಾರು ವಿದ್ಯಾರ್ಥಿಗಳು ಇದರಿಂದ ಪ್ರೇರಣೆಯನ್ನು ಪಡೆದರು.
  • ಕೆಲವೊಂದು ದಿನಗಳು ಎಷ್ಟು ವಿಶೇಷವಾಗಿರುತ್ತವಲ್ಲವೇ. ಬೆಳಿಗ್ಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಹುಟ್ಟಿದ ಹಬ್ಬ. ಹುತಾತ್ಮ ಯೋಧರ ತಂದೆ-ತಾಯಂದಿರೊಂದಿಗೆ ಒಂದು ದಿನ ಕಳೆಯುವುದೆಂದರೆ ಮಹದಾನಂದ ಕೊಡುವ ಸಂಗತಿ. ಈ ಅವಕಾಶಕ್ಕಾಗಿ ಪ್ರತಿ ವರ್ಷವೂ ಯುವಾ ಬ್ರಿಗೇಡ್ ತಪ್ಪದೇ ಕಾಯುತ್ತದೆ. ಸಂದೀಪ್ ಅವರ ತಾಯಿಗೆ surprise ಉಡುಗೊರೆಯೊಂದನ್ನು ಕೊಟ್ಟಾಗ ‘ನನಗೆ ಮಗ ಇಲ್ಲ ಎಂದು ಹೇಳಿದ್ದು ಯಾರು?’ ಎಂದು ಭಾವುಕರಾಗಿ ತಬ್ಬಿಕೊಂಡದ್ದನ್ನು ಮರೆಯಲು ಸಾಧ್ಯವೇ ಇಲ್ಲ. ನಮ್ಮೆಲ್ಲ ಕಾರ್ಯಕರ್ತರನ್ನು ಅವರು ತಮ್ಮ ಮಕ್ಕಳೆಂದೇ ಭಾವಿಸುತ್ತಾರೆ.
    ಸಂಜೆ ನಮ್ಮ ಪಾಲಿಗೆ ತಾಯಿ, ತಂದೆ, ಗುರು, ಇಷ್ಟದೈವ ಎಲ್ಲವೂ ಆಗಿರುವ ರಾಮಕೃಷ್ಣರ ಜಯಂತಿ. ಹೊಸ ಮನೆಯಲ್ಲಿ ಮನೋಜ್ ಮತ್ತು ಅರುಂಧತಿಯವರ ಭಜನೆಯೊಂದಿಗೆ ನಡೆದ ಸತ್ಸಂಗ ಕಾರ್ಯಕ್ರಮ ಈಗಲೂ ಪಸೆಯನ್ನು ಉಳಿಸಿದೆ. ಈ ರೀತಿಯ ಸತ್ಸಂಗಗಳನ್ನು ಆಗಾಗ ಮಾಡಬೇಕೆಂಬ ಬಯಕೆಯನ್ನೂ ಹುಟ್ಟುಹಾಕಿದೆ.
  • ಯುವಾಬ್ರಿಗೇಡ್ ಹಾವೇರಿವತಿಯಿಂದ ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಯೋಧ ಹಬ್ಬ ಆಚರಣೆ ಮಾಡಲಾಯಿತು.

top