ಮನೆಮನೆಗೇ ಊಟ – Fight Corona

ಮನೆಮನೆಗೇ ಊಟ – Fight Corona

ಯುವಾಬ್ರಿಗೇಡ್ ಕರೋನಾ ಕಾಲದಲ್ಲೂ ಸುಮ್ಮನೆ ಇರಲಿಲ್ಲ. ಕರೋನಾದ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಯ್ತು. ಸದಾ ಸಮಾಜದ ಕೆಲಸದಲ್ಲಿ ತೊಡಗಿಸಿಕೊಳ್ಳುವ ಯುವಾಬ್ರಿಗೇಡ್ ಬೆಂಗಳೂರಿನಲ್ಲಿ ಏಪ್ರಿಲ್ 28ರಂದು ಮನೆ-ಮನೆಗೆ ಊಟ ಎಂಬ ಯೋಜನೆಯನ್ನು ಹೊರತಂದಿತು. ಇದರಡಿಯಲ್ಲಿ ಕಾರ್ಯಕರ್ತರು ಬೆಂಗಳೂರಿನ ಕೆಲವು ಸ್ಥಳಗಳಲ್ಲಿ ಕರೋನಾ ದೃಢಪಟ್ಟಿದ್ದು, ಮನೆಯಲ್ಲೇ ಕ್ವಾರೆಂಟೈನ್ ಆಗಿರುವ ಕರೋನಾ ಪೀಡಿತರ ಮನೆಗೇ ಹೋಗಿ ಮಧ್ಯಾಹ್ನದ ಊಟವನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಆಹಾರವನ್ನು ಬಿಎನ್ಎಮ್ ವಿದ್ಯಾಸಂಸ್ಥೆಯವರು ಒದಗಿಸಿಕೊಟ್ಟರೆ, ಸ್ವಾಮಿ ವಿವೇಕಾನಂದ ಶ್ರೇಷ್ಠ ಭಾರತ ಪ್ರತಿಷ್ಠಾನದ ಕಾರ್ಯಕರ್ತರು ನಮ್ಮೊಡನೆ ಪ್ಯಾಕಿಂಗ್ ಮತ್ತು ಆಹಾರದ ವಿತರಣೆಯಲ್ಲಿ ಜೊತೆಗೂಡಿದ್ದರು.

ಬೆಂಗಳೂರಿನಲ್ಲಿ ಸುಮಾರು 15 ದಿನ ನಡೆದ ಈ ಕಾರ್ಯದಲ್ಲಿ 20ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿನಿತ್ಯ 250 ರಿಂದ 300 ಊಟಗಳನ್ನು ತಲುಪಿಸುತ್ತಿದ್ದೆವು.

ಬೆಂಗಳೂರಿನಲ್ಲಿ ಈ ಕಾರ್ಯ ನಡೆಯುತ್ತಿರುವಾಗಲೇ ಹುಬ್ಬಳ್ಳಿ ಮತ್ತು ಕೊಪ್ಪಳದಲ್ಲೂ ಮನೆ-ಮನೆಗೇ ಊಟ ತಲುಪಿಸುವ ಕೆಲಸ ಆರಂಭವಾಯ್ತು. ಎಂಟ್ಹತ್ತು ದಿನಗಳ ಕಾಲ ಯಶಸ್ವಿಯಾಗಿ ಕಾರ್ಯಕರ್ತರು ಚೀನೀ ವೈರಸ್ಸು ಪೀಡಿತರಿಗೆ ಊಟ ತಲುಪಿಸಿತು.

top