ಮತ್ತೆ ಬೆಳಗಲಿ ಬದುಕು

ಮತ್ತೆ ಬೆಳಗಲಿ ಬದುಕು

ಯುವಾ ಬ್ರಿಗೇಡ್ ಸ್ವಚ್ಛಗೊಳಿಸಿರುವ ಕಲ್ಯಾಣಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿ, ಅದನ್ನು ತಮ್ಮದೆಂಬಂತೆ ಕಾಪಾಡಿಕೊಂಡು ಬರಲಿ ಎನ್ನುವ ಕಾರಣಕ್ಕಾಗಿ ರಾಜ್ಯದಾದ್ಯಂತ ದೀಪಾವಳಿಯ ಹಿನ್ನೆಲೆಯಲ್ಲಿ ಮತ್ತೆ ಬೆಳಗಲಿ ಬದುಕು ಎಂಬ ಶೀರ್ಷಿಕೆ ಅಡಿಯಲ್ಲಿ ಹಲವಾರು ಕಡೆ ದೀಪೋತ್ಸವಗಳು ನಡೆಯಿತು.

ರಾಜ್ಯದಾದ್ಯಂತ ನಡೆದಿರುವ ಕೆಲವು ಕಾರ್ಯಕ್ರಮಗಳ ವಿವರಗಳು
1) ದಿನಾಂಕ ೨೨-೧೧-೨೦೨೦ ರಂದು ಬೆಂಗಳೂರಿನ ಜಿಗಣಿಯ ಬಳಿಯಿರುವ ಬೆಟ್ಟದಾಸನ‌ಪುರದ ಕಲ್ಯಾಣಿಯ ದೀಪೋತ್ಸವ ನಡೆಯಿತು. ಪೂರ್ತಿ ಮುಚ್ಚಿಹೋಗಿದ್ದ ಈ ಕಲ್ಯಾಣಿಯನ್ನು ಕಳೆದ ಆಗಸ್ಟ್‌ನಲ್ಲಿ ಸ್ವಚ್ಛಗೊಳಿಸಿ ಈ ಸ್ವರೂಪಕ್ಕೆ ತರಲಾಗಿತ್ತು. ಅನೇಕ ತಾಯಂದಿರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಲ್ಲದೇ ತರುಣರನೇಕ‌ರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬರುವ ದಿನಗಳಲ್ಲಿ ಈ ಕಲ್ಯಾಣಿಯನ್ನು ಇದೇ ಸ್ವರೂಪದಲ್ಲಿ ಉಳಿಸಿಕೊಳ್ಳಬೇಕೆಂಬ ಸಂಕಲ್ಪವನ್ನೂ ಮಾಡಲಾಯ್ತು.
2) ದಿನಾಂಕ: 30.11.2020 ರಂದು ಯುವಾ ಬ್ರಿಗೇಡ್ ಮೈಸೂರು ವತಿಯಿಂದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
3) ಯುವಾ ಬ್ರಿಗೇಡ್ ದ್ಯಾಮವ್ವನಹಳ್ಳಿ ಘಟಕದ ವತಿಯಿಂದ ದೇವಸ್ಥಾನ ಸ್ವಚ್ಚಗೊಳಿಸಿ ದೀಪೋತ್ಸವವನ್ನು ಆಯೋಜಿಸಲಾಯಿತು.
4) ದಿನಾಂಕ: 30.11.2020 ರಂದು ಯುವಾ ಬ್ರಿಗೇಡ್ ಶ್ರೀರಂಗಪಟ್ಟಣ ವತಿಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

top