ಭಾವನೆಗಳ ಕಿಂದರಿಜೋಗಿ

ಭಾವನೆಗಳ ಕಿಂದರಿಜೋಗಿ

Yuva Brigade celebrates valentines day as a Patriots’ Day every year. Each year we honors certain classes that are life-saving for the community. Last year we honored the Powermen in the name of “Shaktiman”. This time we honored 1824 postmen as “Bhavanegala Kindari Jogi” across the state.
ಮೊಬೈಲ್ , ಇಂಟರ್ನೆಟ್, ಇಮೇಲ್ ಗಳಿಲ್ಲದ ಕಾಲದಲ್ಲಿ ನಮ್ಮ ನಡುವಿನ ಪ್ರಮುಖ ಸಂಪರ್ಕ ಸೇತುವಂತಿದ್ದವನು ಅಂಚೆಯಣ್ಣ ಹೆಗಲ ಮೇಲೆ ಅಂಚೆ ಚೀಲ ಹೊತ್ತು ಸೈಕಲ್ ಮೇಲೆ ಮತ ಮತ ಮಧ್ಯಾಹ್ನ ಆತ ಬಂದನೆಂದರೆ ಮನೆ ಮನಗಳಲ್ಲಿ ಅದೇನೋ ಒಂದು ರೀತಿಯ ದುಗುಡ! sslc ಫಲಿತಾಂಶ, ಹೆರಿಗೆ, ಮದುವೆ, ಕೋರ್ಟಿನ ವಾರಂಟ್, ಮಗ ಕಳುಹಿಸಿದ ಮನಿ ಆರ್ಡರ್, ಸಾವು, ರೋಗ ರುಜಿನ, ಎಲ್ಲ ಸಮಾಚಾರಗಳಲ್ಲಿ ನಮ್ಮ ಸುಖ ದುಃಖಗಳಲ್ಲಿ ಭಾಗವಾಗಿದ್ದೂ ತಾನು ಮಾತ್ರ ನಿರಪೇಕ್ಷ ಯೋಗವನ್ನು ಸಿದ್ಧಿಸಿಕೊಂಡವ, ಗಡಿಕಾಯುವ ಸೈನಿಕನಿಂದ ಹಿಡಿದು ಅಡುಗೆ ಮನೆಯೊಳಗಿನ ಅಮ್ಮಂದಿರವರೆಗೆ ಎಲ್ಲರಿಗೂ ಅಣ್ಣನಾಗಿದ್ದವ. ಅಷ್ಟೇ ಏಕೆ ಕರೋನದ ಸಂಕಷ್ಟ ಕಾಲದಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದಾಗಲೂ ಪೋಸ್ಟ್ ಮ್ಯಾನ್ ಗಳು ರಸ್ತೆಗಿಳಿದು ಕೆಲಸ ಮಾಡಿದರು. ಈ ಬಾರಿ ಪಾತ್ರಗಳಷ್ಟೇ ಅಲ್ಲ ಔಷಧಿಗಳನ್ನೂ ಮನೆಗಳಿಗೆ ಮುಟ್ಟಿಸುವ ಕೆಲಸ ಮಾಡಿದರು. ಹಾಗಾಗಿ ಇವರೂ ಕರೋನ ವಾರಿಯರ್ಸ್ ಗಳೇ! ಯುವಾಬ್ರಿಗೇಡ್ ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯನ್ನು ಪ್ರತೀ ವರ್ಷ ದೇಶಪ್ರೇಮಿಗಳ ದಿನವೆಂದು ಆಚರಿಸುತ್ತದೆ. ಪ್ರತಿ ವರ್ಷವೂ ಸಮಾಜಕ್ಕೋಸ್ಕರ ಜೀವ ಸವೆಸುವ ಒಂದಷ್ಟು ವರ್ಗಗಳನ್ನು ಸನ್ಮಾನಿಸುತ್ತದೆ. ಕಳೆದ ವರ್ಷ ಪವರ್‌ಮೆನ್‌ಗಳನ್ನು ಶಕ್ತಿಮಾನ್ ಹೆಸರಲ್ಲಿ ಸನ್ಮಾನಿಸಿದ್ದೆವು. ಈ ಬಾರಿ ಕೊರೋನಾದ ಸಂಕಷ್ಟ ಸಮಯದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಅಂಚೆಯಣ್ಣಂದಿರನ್ನು “ಭಾವನೆಗಳ ಕಿಂದರಿಜೋಗಿ” ಎಂದು ಸನ್ಮಾನಿಸಲಾಯಿತು. ರಾಜ್ಯಾದ್ಯಾಂತ 1824 ಜನ ಅಂಚೆ ಸಿಬ್ಬಂದಿಗಳಿಗೆ ವಿಶೇಷವಾದ ಜರ್ಕಿನ್ ನೀಡುವುದರ ಮೂಲಕ ಸನ್ಮಾನಿಸಲಾಯಿತು.

ವಿವಿಧ ಕಡೆಗಳಲ್ಲಿ ನಡೆದ ಭಾವನೆಗಳ ಕಿಂದರಿಜೋಗಿ ಕಾರ್ಯಕ್ರಮದ ವಿವರಗಳು.

  • ಯುವಾ ಬ್ರಿಗೇಡ್ ಬೆಂಗಳೂರು ವತಿಯಿಂದ ಫೆಬ್ರವರಿ14 ದೇಶ ಪ್ರೇಮಿಗಳ ದಿನದ ಅಂಗವಾಗಿ ಚಿಕ್ಕಪೇಟೆ, ಸಿಟಿ ಮಾರುಕಟ್ಟೆ, ಇಸ್ರೋ ಲೇಔಟ್ , ಕೆಂಗೇರಿ, ಬೆಳಂದೂರು , ಕಾಡುಗೋಡಿ , ಸುಬ್ರಹ್ಮಣ್ಯ ಪುರ , ತಲಘಟ್ಟಪುರ, ಪೀಣ್ಯ 14th ಕ್ರಾಸ್, ಜಯನಗರ 4th ಬ್ಲಾಕ್, ಜೆ.ಪಿ ನಗರ, ಜಿಗಣಿ, ದೂರವಾಣಿ ನಗರ, ಬನಶಂಕರಿ ೧ನೆ ಹಂತ, ಸರ್ಜಾಪುರ ರಸ್ತೆಯ ದೊಡ್ಡ ಕನ್ನಲಿ, ಬನಶಂಕರಿ ಎರಡನೇ ಹಂತ, ಬನಶಂಕರಿ ೩ನೇ ಹಂತದ ನೂರಾರು ಅಂಚೆ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಯಿತು.
  • ಯುವಾ ಬ್ರಿಗೇಡ್ ಕಿತ್ತೂರು ವತಿಯಿಂದ ಎಂ.ಕೆ.ಹುಬ್ಬಳ್ಳಿ, ಕಿತ್ತೂರು, ದಾಸ್ತಿಕೊಪ್ಪ, ಮಲ್ಲಾಪುರದ ಅಂಚೆ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಚಿಕ್ಕೋಡಿ ವತಿಯಿಂದ ಚಿಕ್ಕೋಡಿ ಮುಖ್ಯ ಅಂಚೆ ಕಛೇರಿ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಖಾನಾಪುರ ವತಿಯಿಂದ ಇಟ್ಟಗಿ, ಬೀಡಿ ಗ್ರಾಮದ ಅಂಚೆ ಕಛೇರಿ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಹುಕ್ಕೇರಿ ವತಿಯಿಂದ ಹಿಡಕಲ್ ಡ್ಯಾಂ ಹಾಗೂ ಪಾಶ್ಚಾಪುರ ಮತ್ತು ಹುಕ್ಕೇರಿ ಮುಖ್ಯ ಅಂಚೆ ಕಛೇರಿ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಅಥಣಿ ವತಿಯಿಂದ ಅಥಣಿಯ ಅಂಚೆ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ರಾಯಬಾಗ ವತಿಯಿಂದ ಹಾರೋಗೇರಿ, ಮುಗಳಖೋಡ ಅಂಚೆ ಕಛೇರಿ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ನಗರದ ಮುಖ್ಯ ಅಂಚೆ ಕಛೇರಿ, ಹೊಳಿಹೊಸುರ ಅಂಚೆಕಛೇರಿಯ ಅಂಚೆ ಸಿಬ್ಬಂದಿಗಳನ್ನು, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ/ಮಲ್ಲಾಪುರ್ ಪಿಜಿ ಅಂಚೆ ಕಛೇರಿ ಸಿಬ್ಬಂದಿಗಳನ್ನು, ರಾಮದುರ್ಗ ತಾಲ್ಲೂಕಿನ ಸಬ್ ಪೋಸ್ಟ್ ಆಫೀಸ್ ಸಾಲಹಳ್ಳಿಯಲ್ಲಿ ಸಾಲಹಳ್ಳಿ ಸೇರಿ ಕಟಕೋಳ, ಹನುಮಸಾಗರ, ಚಿಲಮೂರ, ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಅಂಚೆ ಕಛೇರಿ ಸಿಬ್ಬಂದಿಗಳನ್ನು ಫೆಬ್ರವರಿ14 ದೇಶ ಪ್ರೇಮಿಗಳ ದಿನದ ಅಂಗವಾಗಿ ಸನ್ಮಾನಿಸಲಾಯಿತು.
  • ಯುವಾಬ್ರಿಗೇಡ್ ಬಾಗಲಕೋಟೆ ಜಿಲ್ಲೆಯ ವತಿಯಿಂದ ಹುನಗುಂದ ತಾಲೂಕಿನ ಸುಳೇಭಾವಿಯಲ್ಲಿ ಭಾವನೆಗಳ ಕಿಂದರಿಜೋಗಿ ಕಾರ್ಯಕ್ರಮವಿತ್ತು. ಸುಮಾರು 130 ಅಂಚೆಯಣ್ಣಂದಿರನ್ನು ಸನ್ಮಾನಿಸುವ ಭಾಗ್ಯ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರ ಉಪಸ್ಥಿತಿಯಲ್ಲಿ ನೆರವೇರಿತು.
  • ಯುವಾ ಬ್ರಿಗೇಡ್ ಮಳವಳ್ಳಿ ವತಿಯಿಂದ ಅಂಚೆ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಶ್ರೀರಂಗಪಟ್ಟಣ ವತಿಯಿಂದ ಕಿರಂಗೂರು,ಕೆ ಶೆಟ್ಟಳ್ಳಿ,ಎಂ ಶೆಟ್ಟಳ್ಳಿ, ಬಾಬುರಾಯನಕೊಪ್ಪಲು, ಶ್ರೀರಂಗಪಟ್ಟಣ, ಗಂಜಾಂ, ಪಾಂಡವಪುರ ರೈಲ್ವೆ ಸ್ಟೇಷನ್, ಅಂಚೆ ಕಛೇರಿ ಸಿಬ್ಬಂದಿಗಳನ್ನು ಫೆಬ್ರವರಿ14ರ ದೇಶಪ್ರೇಮಿಗಳ ದಿನದ ಅಂಗವಾಗಿ ಸನ್ಮಾನಿಸಲಾಯಿತು.
  • ಹೊನ್ನಾವರ, ಕುಮಟಾದಲ್ಲಿ ನಡೆದ ಭಾವನೆಗಳ ಕಿಂದರಿಜೋಗಿ ಕಾರ್ಯಕ್ರಮದಲ್ಲಿ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರು 90 ಕ್ಕೂ ಹೆಚ್ಚು ಅಂಚೆ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವ ಸಮರ್ಪಿಸಿದರು.
    ಯುವಾ ಬ್ರಿಗೇಡ್ ಹುಣಸೂರು ವತಿಯಿಂದ ಫೆಬ್ರವರಿ14 ದೇಶ ಪ್ರೇಮಿಗಳ ದಿನದ ಅಂಗವಾಗಿ ಅಂಚೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ಬಂಟ್ವಾಳ ವತಿಯಿಂದ ಬಂಟ್ವಾಳ ಅಂಚೆ ಕಛೇರಿ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಸುಳ್ಯ ವತಿಯಿಂದ ಸುಳ್ಯ ಅಂಚೆ ಕಛೇರಿ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಕಡಬ ವತಿಯಿಂದ ಕಡಬ ಅಂಚೆ ಕಛೇರಿ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಸುಬ್ರಹ್ಮಣ್ಯ ವತಿಯಿಂದ ಸುಬ್ರಹ್ಮಣ್ಯ ಅಂಚೆ ಕಛೇರಿ ಸಿಬ್ಬಂದಿಗಳನ್ನು ಫೆಬ್ರವರಿ14ರ ದೇಶಪ್ರೇಮಿಗಳ ದಿನದ ಅಂಗವಾಗಿ ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ರಾಯಚೂರು ವತಿಯಿಂದ ರಾಯಚೂರು ನಗರದ ಅಂಚೆ ಸಿಬ್ಬಂದಿಗಳನ್ನು. ಗಬ್ಬೂರು ಅಂಚೆ ಕಛೇರಿಯ 15 ಅಂಚೆ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಕವಿತಾಳ ವತಿಯಿಂದ ಅಂಚೆ ಕಛೇರಿ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಕಲ್ಮಲಾ ವತಿಯಿಂದ ಕಲ್ಮಲಾ ಅಂಚೆ ಕಛೇರಿಯ ಅಂಚೆ ಪೇದೆಗಳನ್ನು ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ಚಿತ್ರದುರ್ಗ ವತಿಯಿಂದ ಫೆಬ್ರವರಿ14 ದೇಶ ಪ್ರೇಮಿಗಳ ದಿನದ ಅಂಗವಾಗಿ ಅಂಚೆ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ರಾಮನಗರ ವತಿಯಿಂದ ಫೆಬ್ರವರಿ14 ದೇಶ ಪ್ರೇಮಿಗಳ ದಿನದ ಅಂಗವಾಗಿ ಅಂಚೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ದೊಡ್ಡಬಳ್ಳಾಪುರ ವತಿಯಿಂದ ಫೆಬ್ರವರಿ14 ದೇಶಪ್ರೇಮಿಗಳ ದಿನದ ಅಂಗವಾಗಿ ಅಂಚೆ ಕಛೇರಿ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ಕೊರಟಗೆರೆ ವತಿಯಿಂದ ಫೆಬ್ರವರಿ14 ದೇಶ ಪ್ರೇಮಿಗಳ ದಿನದ ಅಂಗವಾಗಿ ಅಂಚೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ಯಾದಗಿರಿ ವತಿಯಿಂದ ಫೆಬ್ರವರಿ14 ದೇಶ ಪ್ರೇಮಿಗಳ ದಿನದ ಅಂಗವಾಗಿ ರಾಮಸಮುದ್ರ ಅಂಚೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ಧಾರವಾಡ ವತಿಯಿಂದ ಫೆಬ್ರವರಿ14 ದೇಶಪ್ರೇಮಿಗಳ ದಿನದ ಅಂಗವಾಗಿ ನಗರದ 60 ಅಂಚೆ ಕಛೇರಿ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರು ಉಪಸ್ಥಿತರಿದ್ದರು.
  • ಸೋದರಿ ನಿವೇದಿತಾ ಪ್ರತಿಷ್ಠಾನ ವತಿಯಿಂದ ಚಿಕ್ಕಮಗಳೂರು ಪ್ರಧಾನ ಪೋಸ್ಟ್ ಆಫೀಸ್ ನಲ್ಲಿ, ಲಕ್ಷ್ಮೀಪುರಂ, ಯಾದವಗಿರಿ, ಕುವೆಂಪುನಗರ ಅಂಚೆಕಛೇರಿಗಳಲ್ಲಿ, ಬೆಂಗಳೂರು ಗ್ರಾಮಾಂತರ ವಿಜಯಪುರದ ಪೋಸ್ಟ್ ಆಫೀಸ್ ನಲ್ಲಿ,ಕೆ.ಆರ್.ಪುರಂನ ಪೋಸ್ಟ್ ಆಫೀಸಿನಲ್ಲಿ, ತರೀಕೆರೆ ಪೋಸ್ಟ್ ಆಫೀಸಿನಲ್ಲಿ, ಅರಸೀಕೆರೆ ಪೋಸ್ಟ್ ಆಫೀಸಿನಲ್ಲಿ, ಎಲೆಕ್ಟ್ರಾನ್ ಸಿಟಿ ಪ್ರಧಾನ ಪೋಸ್ಟ್ ಆಫೀಸಿನಲ್ಲಿ, ಗಂಗಾವತಿಯಲ್ಲಿ, ಸೋದರಿ ನಿವೇದಿತಾ ಪ್ರತಿಷ್ಠಾನ ಕನಕಪುರ ವತಿಯಿಂದ ಪೋಸ್ಟ್ ಆಫೀಸ್ ನಲ್ಲಿ, ಬೆಂಗಳೂರು ಗ್ರಾಮಾಂತರ ಬೂದಿಗೆರೆ ಪೋಸ್ಟ್ ಆಫೀಸ್ ನಲ್ಲಿ, ಸೋದರಿ ನಿವೇದಿತಾ ಪ್ರತಿಷ್ಠಾನ ಚಿತ್ರದುರ್ಗ ವತಿಯಿಂದ ಪೋಸ್ಟ್ ಆಫೀಸ್ ನಲ್ಲಿ, ಸೋದರಿ ನಿವೇದಿತಾ ಪ್ರತಿಷ್ಠಾನ ಸಿಂದಗಿ ವತಿಯಿಂದ ಪೋಸ್ಟ್ ಆಫೀಸ್ ನಲ್ಲಿ, ಸೋದರಿ ನಿವೇದಿತಾ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಮಲ್ಲೇಶ್ವರಂ, ಎಚ್ಎಂಟಿ ಬಡಾವಣೆಯಲ್ಲಿರುವ ನಾಗಸಂದ್ರ ಪೋಸ್ಟ್ ಆಫೀಸ್ ನಲ್ಲಿ , ಸೋದರಿ ನಿವೇದಿತಾ ಪ್ರತಿಷ್ಠಾನ ಚೆನ್ನೈ, MMDA ಕಾಲೋನಿಯ ಅರುಂಬಕ್ಕಮ್ ಪೋಸ್ಟ್ ಆಫೀಸಿನಲ್ಲಿ, ಸೋದರಿ ನಿವೇದಿತಾ ಪ್ರತಿಷ್ಠಾನ ಸಿದ್ದಾಪುರ ಜಿ;ಕೊಪ್ಪಳದಲ್ಲಿ ಅಂಚೆ ಕಛೇರಿ ಸಿಬ್ಬಂದಿಗಳನ್ನು ಸನ್ಮಾನಿಸುವ ಭಾವನೆಗಳ_ಕಿಂದರಿಜೋಗಿ ಕಾರ್ಯಕ್ರಮ ನಡೆಯಿತು.
  • ಯುವಾ ಬ್ರಿಗೇಡ್ ಕಾರಟಗಿ ವತಿಯಿಂದ ಬೂದುಗುಂಪ ಅಂಚೆ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಗಂಗಾವತಿ ವತಿಯಿಂದ ಗಂಗಾವತಿ ಅಂಚೆ ಕಛೇರಿ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ತಾವರಗೇರಾ ವತಿಯಿಂದ ತಾವರಗೇರಾ ಅಂಚೆ ಸಿಬ್ಬಂದಿಗಳನ್ನು, ಯುವಾ ಬ್ರಿಗೇಡ್ ಕೊಪ್ಪಳ ವತಿಯಿಂದ ಕೊಪ್ಪಳ ನಗರದ ಅಂಚೆ ಸಿಬ್ಬಂದಿಗಳನ್ನು ಫೆಬ್ರವರಿ14ರ ದೇಶ ಪ್ರೇಮಿಗಳ ದಿನದ ಅಂಗವಾಗಿ ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ಬಳ್ಳಾರಿ ವತಿಯಿಂದ ಬಳ್ಳಾರಿ ಪ್ರಧಾನ ಅಂಚೆ ಕಛೇರಿಯ ಅಂಚೆ ಪೇದೆಗಳಿಗೆ, ಸಂಡೂರಿನ ಅಂಚೆಕಚೇರಿಯ ಅಂಚೆ ಪೇದೆಗಳಿಗೆ, ಯುವಾ ಬ್ರಿಗೇಡ್ ಸಿರುಗುಪ್ಪ ವತಿಯಿಂದ ಸಿರುಗುಪ್ಪದ ಅಂಚೆ ಸಿಬ್ಬಂದಿಗಳನ್ನು ಗೌರವ ಸಲ್ಲಿಸಲಾಯಿತು.
  • ಯುವಾ ಬ್ರಿಗೇಡ್ ಚಾಮರಾಜನಗರ ವತಿಯಿಂದ ಫೆಬ್ರವರಿ14 ದೇಶ ಪ್ರೇಮಿಗಳ ದಿನದ ಅಂಗವಾಗಿ ಚಾಮರಾಜನಗರದ ಅಂಚೆ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ಕಲಬುರಗಿ ವತಿಯಿಂದ ಫೆಬ್ರವರಿ14 ದೇಶ ಪ್ರೇಮಿಗಳ ದಿನದ ಅಂಗವಾಗಿ ಅಂಚೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ಅಫ್ಜಲ್ ಪುರ ವತಿಯಿಂದ ಶ್ರೀ ವೀರಮಹಾಂತ ಶಿವಾಚಾರ್ಯರ ಸಾನಿದ್ಯದಲ್ಲಿ 30 ಕ್ಕು ಹೆಚ್ಚು ಪೊಸ್ಟಮ್ಯಾನ್ ಗಳನ್ನು ಸನ್ಮಾನಿಸಲಾಯಿತು.
  • ಯುವಾ ಬ್ರಿಗೇಡ್ ಬೀದರ್ ವತಿಯಿಂದ ಫೆಬ್ರವರಿ14 ದೇಶ ಪ್ರೇಮಿಗಳ ದಿನದ ಅಂಗವಾಗಿ ಹುಮನಾಬಾದ್ ಅಂಚೆ ಕಛೇರಿ ಅಂಚೆ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

top