ನಮಸ್ತೆ ಪುನಃ ಬನ್ನಿ

ನಮಸ್ತೆ ಪುನಃ ಬನ್ನಿ

After several months of corona pandemic, schools are getting ready to reopen. Cleaning the surroundings of the government schools before its getting reopened to facilitate study environment for students. ” Namaste punaha banni” is the name given to this program.

ಕರೋನ ಹಾವಳಿ ಮುಗಿದು ಶಾಲೆ ಪುನರಾರಂಭವಾಗುವ ಹೊತ್ತಲ್ಲಿ ಸರಕಾರಿ ಶಾಲೆಗಳನ್ನು ಸ್ವಚ್ಛಗೊಳಿಸಿ ಮತ್ತೆ ಅಧ್ಯಯನಯೋಗ್ಯ ವಾತಾವರಣವನ್ನು ನಿರ್ಮಿಸುವ ಕಾರ್ಯವನ್ನು ಯುವಾ ಬ್ರಿಗೇಡ್ ಕೈಗೆತ್ತಿಕೊಂಡಿತು. ಮಕ್ಕಳು ಮರೆತೇ ಹೋಗಿರುವ ಶಾಲೆಗಳಿಗೆ ಅವರನ್ನು ಪುನಃ ಸ್ವಾಗತಿಸುವ ಕೆಲಸವನ್ನು ಯುವಾ ಬ್ರಿಗೇಡ್ ಮಾಡುತ್ತಿದೆ.

ರಾಜ್ಯದಾದ್ಯಂತ ಸರಕಾರಿ ಶಾಲೆಗಳ ಸ್ವಚ್ಛತಾ ಕಾರ್ಯಕ್ರಮಗಳು

 • ಯುವಾ ಬ್ರಿಗೇಡ್ ಸುಳ್ಯ ವತಿಯಿಂದ ಚಂಬು ದಬ್ಬಡ್ಕ ಎಂಬಲ್ಲಿ ಸರ್ಕಾರಿ ಶಾಲೆಯ ಸ್ವಚ್ಛತೆ ಮಾಡಲಾಯಿತು.
 • ಯುವಾ ಬ್ರಿಗೇಡ್ ಬಂಟ್ವಾಳ ವತಿಯಿಂದ ಮಲ್ಲಡ್ಕ ಹಿರಿಯ ಪ್ರಾಥಮಿಕ ಶಾಲೆಯ ಕುಡಿಯುವನೀರಿನ ಟಾಂಕಿ ಮತ್ತು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
 • ಯುವಾಬ್ರಿಗೇಡ್ ಸುಬ್ರಹ್ಮಣ್ಯ ಮತ್ತು ಯುವಾಬ್ರಿಗೇಡ್ ಕಡಬ ವತಿಯಿಂದ ಬೀದಿಗುಡ್ಡೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಸ್ವಚ್ಛತಾ ಕಾರ್ಯ ನಡೆಯಿತು
 • ಯುವಾ ಬ್ರಿಗೇಡ್ ಕಡಬ ವತಿಯಿಂದ ಮೀನಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ವಚ್ಛತೆ ಮತ್ತು ಬಣ್ಣ ಹಚ್ಚುಕಾರ್ಯ ಮಾಡಲಾಯಿತು. ಮದುವೆಯಾದ ಮರು ದಿನವೇ ಕಾರ್ಯಕರ್ತರೊಬ್ಬರು ಪತ್ನಿ ಸಮೇತ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
 • ಯುವಾ ಬ್ರಿಗೇಡ್ ಬಸ್ರೂರ್, ಬಳ್ಕೂರ್ ವತಿಯಿಂದ ಬಳ್ಕೂರ್ ಉತ್ತರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಳ್ಳುಂಜೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ವಚ್ಛಗೊಳಿಸಲಾಯಿತು.
 • ಯುವಾಬ್ರಿಗೇಡ್ ಕುಂದೂರ ಗ್ರಾಮದ ಶ್ರೀ ಗುರು ಕೊಟ್ಟೂರೇಶ್ವರ ಪ್ರೌಢ ಶಾಲೆಯ ಕಂಪೌಂಡ್ ಪಕ್ಕದಲ್ಲಿ ಬೆಳೆದಿರುವ ಅನುಪಯುಕ್ತ ಗಿಡಗಳ ಕಟಾವು ಮಾಡಿ ಸ್ವಚ್ಛಗೊಳಿಸಲಾಯಿತು.
 • ಯುವಾ ಬ್ರಿಗೇಡ್ ಹೊಳಿಹೊಸೂರ ವತಿಯಿಂದ 2ನೇ ಹಂತದಲ್ಲಿ ಕನ್ನಡ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು.
 • ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಸ್ವಚ್ಛ ಮಾಡಲಾಯಿತು.
 • ಯುವಾಬ್ರಿಗೇಡ್ ಹುಲಸೂರು ವತಿಯಿಂದ ಪಟ್ಟಣದ ಅಂಗನವಾಡಿ, ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು.
 • ಯುವಾ ಬ್ರಿಗೇಡ್ ಧಾರವಾಡ ವತಿಯಿಂದ ಕಲಘಟಗಿ ತಾಲ್ಲೂಕಿನ ಜೋಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು.
 • ಯುವಾ ಬ್ರಿಗೇಡ್ ಕಲ್ಲೋಳ್ಳಿ ವತಿಯಿಂದ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ ಹೆಂಚುಗಳನ್ನು ಮರುಜೋಡಿಸಿ, ಸ್ವಚ್ಛಗೊಳಿಸಲಾಯಿತು.
 • ನ್ಯಾಮತಿಯ ಯುವಾಬ್ರಿಗೇಡ್ ತಂಡವು ಪಟ್ಟಣದ 1914 ರಲ್ಲಿ ಆರಂಭವಾಗಿ ಒಂದು ಶತಮಾನ ಪೂರೈಸಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ವಚ್ಛಗೊಳಿಸಲಾಯಿತು..
 • ಯುವಾ ಬ್ರಿಗೇಡ್ ಯಾದಗಿರಿ ವತಿಯಿಂದ ಯಾದಗಿರಿಯ ಭೋವಿವಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ವಚ್ಛಗೊಳಿಸಲಾಯಿತು.
 • ಯುವಾಬ್ರಿಗೇಡ್ ಹಾವೇರಿ, ಆಲದಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಪಕ್ಕದಲ್ಲಿ ಬೆಳೆದಿದ್ದ ಅನುಪಯುಕ್ತ ಗಿಡಗಳನ್ನು ಕಟಾವು ಮಾಡಿ, ಸ್ವಚ್ಛತೆ ಮಾಡಲಾಯಿತು.
 • ಯುವಾಬ್ರಿಗೇಡ್ ಕಾಗಿನೆಲೆ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಗಿನೆಲೆಯ ಆವರಣದಲ್ಲಿ ಬೆಳೆದಿರುವ ಹುಲ್ಲು ಮತ್ತು ವಿವಿಧ ಸಸ್ಯ ಪ್ರಭೇದಗಳನ್ನು ಕಟಾವು ಮಾಡಿ ಸ್ವಚ್ಛ ಮಾಡಲಾಯಿತು ಮತ್ತು ಸುತ್ತುಗೋಡೆಗೆ ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ರಾಮನಗರ ವತಿಯಿಂದ ನಗರದ 150 ವರ್ಷಗಳ ಇತಿಹಾಸದ ಸರ್ಕಾರಿ ಮೆಹಿನ್ ಶಾಲೆಯ ಕೊಠಡಿಗಳನ್ನು ಮತ್ತು ಆವರಣವನ್ನು ಸ್ವಚ್ಛಗೊಳಿಸಲಾಯಿತು.
 • ಯುವಾ ಬ್ರಿಗೇಡ್ ಬಂಗಾರಪೇಟೆ ವತಿಯಿಂದ ಬೂದಿಕೋಟೆ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣವನ್ನು ಸ್ವಚ್ಚಗೊಳಿಸಲಾಯಿತು.
 • ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಗುಡೇಅಂಗಡಿ ಅಂಗನವಾಡಿ ಕೇಂದ್ರದ ಸುತ್ತಲು ಬೆಳೆದಿರುವ ಮುಳ್ಳಿನ ಪೊದೆಗಳನ್ನು ಸ್ವಚ್ಚ ಮಾಡಿ ಅಲ್ಲಿ ಬಿದ್ದಿರುವ ಮಧ್ಯದ ಬಾಟಲಗಳನ್ನು ಹಾಗೂ ಪ್ಲಾಸ್ಟಿಕ್ ಬಾಟಲಗಳನ್ನು ತೆಗೆದು ಸ್ವಚ್ಚ ಮಾಡಲಾಯಿತು.
 • ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಕುಮಟಾದ ಹೆಗಡೆ ಚಿಟ್ಟಿಕಂಬಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಲಾಯಿತು.
 • ಯುವಾ ಬ್ರಿಗೇಡ ಹೊನ್ನಾವರ ವತಿಯಿಂದ ಮಹಿಮೆಗ್ರಾಮದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ವಚ್ಛತೆ ಮಾಡಲಾಯಿತು.
 • ಯುವಾಬ್ರಿಗೇಡ್ ಬೆಂಗಳೂರು ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲಿನ ಡೈರಿ ಹತ್ತಿರ ಚನ್ನಸಂದ್ರ, ಕಾಡುಗೋಡಿ ಯಲ್ಲಿ ಸ್ವಚ್ಛತೆ ಕಾರ್ಯ ನಡೆಯಿತು.
 • ಯುವಾಬ್ರಿಗೇಡ್ ಬೆಂಗಳೂರು ಪೀಣ್ಯ ವತಿಯಿಂದ ಸರ್ಕಾರಿ ಶಾಲೆ ಯನ್ನು ಸ್ವಚ್ಛತೆ ಮಾಡಲಾಯಿತು.
 • ಯುವಾ ಬ್ರಿಗೇಡ್ ಬೆಂಗಳೂರು ವತಿಯಿಂದ ಕರಿವಾಬನಹಳ್ಳಿ, ನಾಗಸಂದ್ರದ ಸರಕಾರಿ ಕಿರಿಯ ಪ್ರಾಥಮಿಕಶಾಲೆಯನ್ನು ಸ್ವಚ್ಛಗೊಳಿಸಲಾಯಿತು
 • ಯುವಾ ಬ್ರಿಗೇಡ್ ಮಾವಳಿಪುರದ ವತಿಯಿಂದ ಶಿವಕೋಟೆಯ ಮಾವಳಿಪುರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಸ್ವಚ್ಛಗೊಳಿಸಲಾಯಿತು.
 • ಯುವಾ ಬ್ರಿಗೇಡ್ ಹೊಸಕೋಟೆ ವತಿಯಿಂದ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ ಸಸಿಗಳನ್ನು ನೆಡಲಾಯಿತು.
top