ನಡೆಮುಂದೆ ಹಿಗ್ಗಿ ನಡೆಮುಂದೆ

ನಡೆಮುಂದೆ ಹಿಗ್ಗಿ ನಡೆಮುಂದೆ

ಯುವಾಬ್ರಿಗೇಡ್ ರಾಜ್ಯೋತ್ಸವ ಪ್ರಶಸ್ತಿ ಸ್ವೀಕಾರ ಮಾಡುವ ಹೊತ್ತಲ್ಲಿ ಯುವಾಬ್ರಿಗೇಡ್‌ನ ಕಾರ್ಯಕರ್ತರು ರಾಜ್ಯಾದ್ಯಂತ ಸರ್ಕಾರಿ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ, ಸುಣ್ಣ ಬಳಿದು ಸುಂದರ ರೂಪ ಕೊಡುತ್ತಿದ್ದರು. ಕೊರೋನಾ ಬಂದಿದೆ ಎಂದು ಎಚ್ಚರಿಕೆ ವಹಿಸಬೇಕು ಸರಿ. ಆದರೆ, ಎಷ್ಟು ದಿನ ಚಟುವಟಿಕೆಗಳನ್ನು ನಿಲ್ಲಿಸಿಯೇ ಬಿಡುವುದು ಹೇಳಿ. ಚಟುವಟಿಕೆಗಳ ಪುನರಾರಂಭವಾಗಿದೆ ಎಂಬ ವಿಶ್ವಾಸ ಮೂಡಲು ಬಸ್ ನಿಲ್ದಾಣಗಳು ಕ್ರಿಯಾಶೀಲವಾಗಿರುವುದೊಂದೇ ದಾರಿ. ಹಾಗೆಂದೇ ಈ ಪ್ರಯತ್ನ. ಇನ್ನು ಮುಂದೆ ಕೊರೋನಾ ನಿಂತುಬಿಡಲಿ.‌ ನಾವು ಮುಂದೆ ನುಗ್ಗೋಣ. ಇದು ನಮ್ಮ ಸಂಘಟನೆಗೂ ಅನ್ವಯವಾಗುತ್ತದೆ. ಪ್ರಶಸ್ತಿಗಳು, ಬೈಗುಳಗಳು ನಮ್ಮ ಪಾಲಿಗೆ ಯಾವಾಗಲೂ ಒಂದೇ. ನಾವು ಮತ್ತು ನಾವೆಲ್ಲರೂ ಇನ್ನು ಮುಂದೆ ಕವಿವಾಣಿ #ನಡೆಮುಂದೆ_ಹಿಗ್ಗಿನಡೆಮುಂದೆ ಎಂಬುದನ್ನು ಅನುಸರಿಸಿ ಜಗ್ಗದೇ ಕುಗ್ಗದೇ ನಡೆಯೋಣ. ಮೈಯೆಲ್ಲಾ ಕಣ್ಣಾಗಿಸಿ ಎಚ್ಚರಿಕೆಯಿಂದಿರೋಣ‌ ನಿಜ. ಆದರೆ ಚಟುವಟಿಕೆಗಳೂ ನಿಲ್ಲದೇ ಇರಲಿ.
ಯುವಾಬ್ರಿಗೇಡ್‌ಗೆ ಸಂದಿರುವ ಈ ಪುರಸ್ಕಾರದ ಆನಂದ ನಾಡಿನ ಎಲ್ಲ ಜನಕ್ಕೂ ಸಿಗಬೇಕಲ್ಲವೇ. ಹಾಗೆಂದೇ ಈ ಮಹಾ ಅಭಿಯಾನ.

  • ಯುವಾಬ್ರಿಗೇಡ್ ಹಾವೇರಿ ವತಿಯಿಂದ ಆಲದಕಟ್ಟಿ ಗ್ರಾಮದ ಬಸ್ ನಿಲ್ದಾಣ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
  • ಯುವಾಬ್ರಿಗೇಡ್ ಧಾರವಾಡ ವತಿಯಿಂದ, ಧಾರವಾಡದ ಜರ್ಮನ್ ಆಸ್ಪತ್ರೆ ಸರ್ಕಲ್ ಬಳಿ ಇರುವ ಬಸ್ ನಿಲ್ದಾಣವನ್ನು ಸ್ವಚ್ಛ ಮಾಡಿ ಬಣ್ಣ ಹಚ್ಚಲಾಯಿತು.
  • ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದ ಬಸ್ ನಿಲ್ದಾಣವನ್ನು ಯುವಾ ಬ್ರಿಗೇಡ್ ಕಲ್ಮಲಾ(ರಾಯಚೂರು ಜಿಲ್ಲೆ) ಸ್ವಚ್ಛಗೊಳಿಸಿ, ಬಣ್ಣದಿಂದ‌ ಸುಂದರಗೊಳಿಸಿ ಅದೇ ನಿಲ್ದಾಣದಲ್ಲಿ ವಿವೇಕಾನಂದರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿವೇಕಾನಂದರ ಜಯಂತಿಯನ್ನು ಆಚರಿಸಿದರು.
  • ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಬಸ್ ತಂಗುದಾಣದ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
top