ನಡೆಮುಂದೆ ಹಿಗ್ಗಿನಡೆಮುಂದೆ-nademunde higginademunde

ನಡೆಮುಂದೆ ಹಿಗ್ಗಿನಡೆಮುಂದೆ-nademunde higginademunde

yuva brigade has recently organised of cleaning of various bus stands throughout karnataka named as “nademunde higgi nademunde”

ಯುವಾಬ್ರಿಗೇಡ್ ರಾಜ್ಯೋತ್ಸವ ಪ್ರಶಸ್ತಿ ಸ್ವೀಕಾರ ಮಾಡುವ ಹೊತ್ತಲ್ಲಿ ಯುವಾಬ್ರಿಗೇಡ್‌ನ ಕಾರ್ಯಕರ್ತರು ರಾಜ್ಯಾದ್ಯಂತ ಸರ್ಕಾರಿ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿ, ಸುಣ್ಣ ಬಳಿದು ಸುಂದರ ರೂಪ ಕೊಡುತ್ತಿದ್ದರು. ಕೊರೋನಾ ಬಂದಿದೆ ಎಂದು ಎಚ್ಚರಿಕೆ ವಹಿಸಬೇಕು ಸರಿ. ಆದರೆ, ಎಷ್ಟು ದಿನ ಚಟುವಟಿಕೆಗಳನ್ನು ನಿಲ್ಲಿಸಿಯೇ ಬಿಡುವುದು ಹೇಳಿ. ಚಟುವಟಿಕೆಗಳ ಪುನರಾರಂಭವಾಗಿದೆ ಎಂಬ ವಿಶ್ವಾಸ ಮೂಡಲು ಬಸ್ ನಿಲ್ದಾಣಗಳು ಕ್ರಿಯಾಶೀಲವಾಗಿರುವುದೊಂದೇ ದಾರಿ. ಹಾಗೆಂದೇ ಈ ಪ್ರಯತ್ನ. ಇನ್ನು ಮುಂದೆ ಕೊರೋನಾ ನಿಂತುಬಿಡಲಿ.‌ ನಾವು ಮುಂದೆ ನುಗ್ಗೋಣ. ಇದು ನಮ್ಮ ಸಂಘಟನೆಗೂ ಅನ್ವಯವಾಗುತ್ತದೆ. ಪ್ರಶಸ್ತಿಗಳು, ಬೈಗುಳಗಳು ನಮ್ಮ ಪಾಲಿಗೆ ಯಾವಾಗಲೂ ಒಂದೇ. ನಾವು ಮತ್ತು ನಾವೆಲ್ಲರೂ ಇನ್ನು ಮುಂದೆ ಕವಿವಾಣಿ #ನಡೆಮುಂದೆ_ಹಿಗ್ಗಿನಡೆಮುಂದೆ ಎಂಬುದನ್ನು ಅನುಸರಿಸಿ ಜಗ್ಗದೇ ಕುಗ್ಗದೇ ನಡೆಯೋಣ. ಮೈಯೆಲ್ಲಾ ಕಣ್ಣಾಗಿಸಿ ಎಚ್ಚರಿಕೆಯಿಂದಿರೋಣ‌ ನಿಜ. ಆದರೆ ಚಟುವಟಿಕೆಗಳೂ ನಿಲ್ಲದೇ ಇರಲಿ.
ಯುವಾಬ್ರಿಗೇಡ್‌ಗೆ ಸಂದಿರುವ ಈ ಪುರಸ್ಕಾರದ ಆನಂದ ನಾಡಿನ ಎಲ್ಲ ಜನಕ್ಕೂ ಸಿಗಬೇಕಲ್ಲವೇ. ಹಾಗೆಂದೇ ಈ ಮಹಾ ಅಭಿಯಾನ.

ಯುವಾ ಬ್ರಿಗೇಡ್ ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ಬಸ್ ನಿಲ್ದಾಣಗಳ ಸ್ವಚ್ಛತೆಯ ಕಾರ್ಯಕ್ರಮಗಳು

 • ಯುವಾಬ್ರಿಗೇಡ್ ಹಾವೇರಿ ವತಿಯಿಂದ ಆಲದಕಟ್ಟಿ ಗ್ರಾಮದ ಬಸ್ ನಿಲ್ದಾಣ, ರಾಣೆಬೆನ್ನೂರು ತಾಲ್ಲೂಕಿನ ಮುಷ್ಟೂರು ಬಸ್ ತಂಗುದಾಣ, ಶಿಗ್ಗಾವಿಯ ಗುಡ್ಡದ ಚನ್ನಾಪುರ ಗ್ರಾಮದ ಬಸ್ ತಂಗುದಾಣ, ಶಿಗ್ಗಾಂವಿ ತಾಲ್ಲೂಕು ಬಂಕಾಪುರ ಗ್ರಾಮದ ಕೊಟ್ಟಿಗೇರಿಯ ಬಸ್ ನಿಲ್ದಾಣ, ಹಾವೇರಿ ನಗರದ ಎಲ್‌ಐಸಿ ಕಛೇರಿ ಬಳಿ ಇರುವ ಬಸ್ ತಂಗುದಾಣ, ರಾಣೆಬೆನ್ನೂರು ತಾಲ್ಲೂಕಿನ ಕೆರೆಮಲ್ಲಾಪುರ ಗ್ರಾಮದ ಬಸ್ ತಂಗುದಾಣಗಳನ್ನೂ ಸ್ವಚ್ಛಗೊಳಿಸಿ, ಬಣ್ಣ ಹಚ್ಚಿ ಅಂದಗೊಳಿಸಲಾಯಿತು.
 • ಯುವಾಬ್ರಿಗೇಡ್ ಧಾರವಾಡ ವತಿಯಿಂದ, ಧಾರವಾಡದ ಜರ್ಮನ್ ಆಸ್ಪತ್ರೆ ಸರ್ಕಲ್ ಬಳಿ ಇರುವ ಬಸ್ ನಿಲ್ದಾಣವನ್ನು ಸ್ವಚ್ಛ ಮಾಡಿ ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ರಾಯಚೂರು ವತಿಯಿಂದ ಸಿಂಧನೂರಿನ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ಗಬ್ಬೂರು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಸ್ವಚ್ಛಗೊಳಿಸಿದ್ದಲ್ಲದೆ, ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದ ಬಸ್ ನಿಲ್ದಾಣವನ್ನು ಯುವಾ ಬ್ರಿಗೇಡ್ ಕಲ್ಮಲಾ(ರಾಯಚೂರು ಜಿಲ್ಲೆ) ಸ್ವಚ್ಛಗೊಳಿಸಿ, ಬಣ್ಣದಿಂದ‌ ಸುಂದರಗೊಳಿಸಿ ಅದೇ ನಿಲ್ದಾಣದಲ್ಲಿ ವಿವೇಕಾನಂದರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿವೇಕಾನಂದರ ಜಯಂತಿಯನ್ನು ಆಚರಿಸಿದರು.
 • ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದ ಬಸ್ ತಂಗುದಾಣ, ಅಥಣಿ ತಾಲ್ಲೂಕಿನ ಘಟನಟ್ಟಿ ಗ್ರಾಮದ ಬಸ್ ತಂಗುದಾಣ, ಹುಕ್ಕೇರಿ ತಾಲ್ಲೂಕಿನ ಹೊಸೂರು ಗ್ರಾಮದ ಬಸ್ ತಂಗುದಾಣ, ಮೂಡಲಗಿ ತಾಲ್ಲೂಕಿನ ಹೊಸಯರಗುದ್ರಿಯ ಬಸ್ ತಂಗುದಾಣ, ಹುಕ್ಕೇರಿ ತಾಲ್ಲೂಕಿನ ನದಿಗುಡಿಕೇತರ ಗ್ರಾಮದ ಬಸ್ ತಂಗುದಾಣ, ಗೋಕಾಕ್ ತಾಲ್ಲೂಕಿನ ಬೆಟಗೇರಿ ಗ್ರಾಮದ ಬಸ್ ತಂಗುದಾಣಎಂ.ಕೆ.ಹುಬ್ಬಳ್ಳಿಯ ಬಸ್ ತಂಗುದಾಣದ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ಬಳ್ಳಾರಿಯ ಜಿಲ್ಲಾಸ್ಪತ್ರೆಯ ಬಳಿಯ ನಿಲ್ದಾಣ, ಯುವಾ ಬ್ರಿಗೇಡ್ ಬಳ್ಳಾರಿ ನಗರ ವತಿಯಿಂದ ನಗರದ ಸತ್ಯನಾರಾಯಣ ಪೇಟೆಯ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ, ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಮಣ್ಣೂರು ಬಸ್ ತಂಗುದಾಣದ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ಬಾಗಲಕೋಟೆ ವತಿಯಿಂದ ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯಲಾಯಿತು ಮತ್ತು ಬಾದಾಮಿ ತಾಲ್ಲೂಕಿನ ನಸಿಬಿ ಗ್ರಾಮದ ಬಸ್ ತಂಗುದಾಣದ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ವಿಜಯಪುರ ಜಿಲ್ಲೆಯ ಕುರುಬತಳ್ಳಿ ಬಸ್ ತಂಗುದಾಣದ ಸ್ವಚ್ಛತೆ ಮಾಡಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ಉತ್ತರಕನ್ನಡ ಜಿಲ್ಲೆ ಕುಮಟಾದ ಹೆಗಡೆ ಕ್ರಾಸ್ ಬಳಿ ಇರುವ ಬಸ್ ತಂಗುದಾಣ, ಹೊನ್ನಾವರ ತಾಲ್ಲೂಕಿನ ಅರೆಅಂಗಡಿ ಗ್ರಾಮದ ಬಸ್ ತಂಗುದಾಣ, ಜೋಯಿಡಾ ಬಳಿಯ ಉಳವಿ ಗ್ರಾಮದ ಬಸ್ ತಂಗುದಾಣ ಹಾಗೂ ಹೊನ್ನಾವರ ತಾಲ್ಲೂಕಿನ ದೇವರಗದ್ದೆ ಗ್ರಾಮದ ಬಸ್ ತಂಗುದಾಣದ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದ ಬಸ್ ತಂಗುದಾಣದ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಗೋಳಿಹೊಳೆ ಗ್ರಾಮದ ಬಸ್ ತಂಗುದಾಣದ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ಕೊಪ್ಪಳ ಜಿಲ್ಲೆ ದದೇಗಲ್ ಗ್ರಾಮದ ಬಸ್ ತಂಗುದಾಣ, ತಾವರಗೇರಾ ಪಟ್ಟಣದ ಬಸ್ ತಂಗುದಾಣಗಳಲ್ಲಿ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ಗದಗದ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಇರುವ ಬಸ್ ತಂಗುದಾಣದ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು
 • ಯುವಾ ಬ್ರಿಗೇಡ್ ವತಿಯಿಂದ ತುಮಕೂರು ನಗರದ ಟೌನ್ ಹಾಲ್ ವೃತ್ತದ ಬಳಿ ಇರುವ ಮತ್ತು ಸರ್ಕಾರಿ ಆಸ್ಪತ್ರೆಯ ಮುಂಭಾಗದ ಬಸ್ ತಂಗುದಾಣಗಳ ಸ್ವಚ್ಛತೆ ಮಾಡಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಜೇಡಗೇರಿಯ ಬಸ್ ತಂಗುದಾಣ, ಹರಕೆರೆಯ ಬಸ್ ತಂಗುದಾಣ, ಶಿಕಾರಿಪುರ ತಾಲ್ಲೂಕಿನ ಅಂಬಾರಗೊಪ್ಪ ಬಸ್ ತಂಗುದಾಣ ಹಾಗೂ ಬೆಲವಂತಕೊಪ್ಪ ಬಸ್ ತಂಗುದಾಣಗಳ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
 • ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಯಮದೂರು ಮತ್ತು ಮಾರ್ಕಲ್ ಗ್ರಾಮದ ಬಸ್ ತಂಗುದಾಣ ಮತ್ತು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿನ ಬಸ್ ತಂಗುದಾಣ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ನಂಜನಗೂಡಿನ ಮುಳ್ಳೂರು ಬಸ್ ತಂಗುದಾಣದ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.
 • ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಬಸ್ ತಂಗುದಾಣದ ಸ್ವಚ್ಛತೆ ಮಾಡಿ, ಬಣ್ಣ ಹಚ್ಚಲಾಯಿತು.

top