ಕ್ಷೇತ್ರ ಸ್ವಚ್ಛತೆ

ಕ್ಷೇತ್ರ ಸ್ವಚ್ಛತೆ

ಧಾರ್ಮಿಕ ಕ್ಷೇತ್ರಗಳನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ, ಆದ್ದರಿಂದ ಯುವಾ ಬ್ರಿಗೇಡ್ ಹಲವು ದೇವಸ್ಥಾನಗಳಲ್ಲಿ ಸ್ವಚ್ಛತೆಯನ್ನು ಹಮ್ಮಿಕೊಂಡಿತ್ತು. ಅದರಲ್ಲಿ ಸಾವಿರ ವರ್ಷಗಳಷ್ಟು ಹಳೆಯದಾದ ರಾಷ್ಟ್ರಕೂಟರ ಕಾಲಕ್ಕೆ ಸೇರಿದ ದೇವಸ್ಥಾನ ಮತ್ತು ಪುಷ್ಕರಣಿಯನ್ನು ಸ್ವಚ್ಛಗೊಳಿಸಿದ್ದು ಹೆಮ್ಮೆಯ ಸಂಗತಿ,

2021 ರ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಸ್ವಚ್ಛಗೊಳಿಸಿದ ಕಾರ್ಯಕ್ರಮಗಳು.

 • ಯುವಾಬ್ರಿಗೇಡ್ ಗಬ್ಬೂರು ವತಿಯಿಂದ ಶ್ರೀ ಬೂದಿಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಠದ ಆವರಣದಲ್ಲಿ ಸ್ವಚ್ಛತೆ ಮಾಡಲಾಯಿತು.
 • ಯುವಾ ಬ್ರಿಗೇಡ್ ಕಿತ್ತೂರು ವತಿಯಿಂದ ಅವರಾದಿ ಹತ್ತಿರವಿರುವ ಶ್ರೀ ರಾಮ ಲಿಂಗೇಶ್ವರ ದೇವಸ್ಥಾನದ ಸ್ವಚ್ಚತಾ ಕಾರ್ಯ ಮಾಡಲಾಯಿತು.
 • ಯುವಾ ಬ್ರಿಗೇಡ್ ತರೀಕೆರೆ ವತಿಯಿಂದ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಸ್ವಚ್ಛತೆ ಮಾಡಲಾಯಿತು.
 • ಇತ್ತೀಚೆಗೆ ಕಲಬುರಗಿಯ ಚಿತ್ತಾಪುರ ತಾಲೂಕಿನ ರಾವೂರ್‌ ಗ್ರಾಮದಲ್ಲಿ ರಾಷ್ಟ್ರಕೂಟರ ಕಾಲದ್ದೆಂದು ಹೇಳಲಾಗುವ ಸಾವಿರ ವರ್ಷಕ್ಕೂ ಹಳೆಯ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಅದಕ್ಕೆ ಹೊಂದಿಕೊಂಡ ಪುಷ್ಕರಣಿಯ ಸ್ವಚ್ಛತಾ ಕಾರ್ಯ ಆರಂಭಿಸಲಾಯ್ತು.
  ಸ್ವತಃ ಪೂಜ್ಯ ಸಿದ್ಧಲಿಂಗ ದೇವರು ಹಾಗೂ ಯುವಾ ಬ್ರಿಗೇಡ್‌ನ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರು ಈ ಚಟುವಟಿಕೆಯಲ್ಲಿ ಪಾಲ್ಗೊಂಡು ಊರಿನ ತರುಣರಲ್ಲಿ ಉತ್ಸಾಹ ತುಂಬಿದರು.
 • ಯುವಾ ಬ್ರಿಗೇಡ್ ಸೊರಬ ವತಿಯಿಂದ ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಸುತ್ತ ಸ್ವಚ್ಚತೆ ಮಾಡಲಾಯಿತು.
 • ಯುವಾ ಬ್ರಿಗೇಡ್ ಅಡ್ಯನಡ್ಕ ಕಾರ್ಯಕರ್ತರಿಂದ ವಿಟ್ಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಸ್ವಚ್ಛತಾ ಕಾರ್ಯ ಮಾಡಲಾಯಿತು.
 • ಯುವಾಬ್ರಿಗೇಡ್‌ ಗದಗ ವತಿಯಿಂದ ಕೋನೇರಿ ಮಾರುತಿ ದೇವಸ್ಥಾನ ಮತ್ತು ಕೊನೇರಿ ಹೊಂಡ ಎರಡು ಹಂತಗಳಲ್ಲಿ ಸ್ವಚ್ಛತೆ ಮಾಡಲಾಯಿತು.
 • ಯುವಾ ಬ್ರಿಗೇಡ್ ಶಿವಮೊಗ್ಗ ವತಿಯಿಂದ ನಗರದ ಕೋಟೆ ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛಗೊಳಿಸಲಾಯಿತು. ಈ ಸಮಯದಲ್ಲಿ ಈ ವಾರ್ಡನ ಕಾರ್ಪೊರೇಟರ್ ಆದ ಪ್ರಭಾಕರವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
 • ಯುವಾ ಬ್ರಿಗೇಡ್ ತೀರ್ಥಹಳ್ಳಿಯ ವತಿಯಿಂದ ದಿನಾಂಕ 10.01.2020 ತಾಲ್ಲೂಕಿನ ಕುರುವಳ್ಳಿ ಗ್ರಾಮದ ಶ್ರೀಪುತ್ತಿಗೆ ಮಠದ ಪಕ್ಕದಲ್ಲಿರುವ ಶ್ರೀ ಗೌರಿ ಶಂಕರ ದೇವಸ್ಥಾನದ ಆವರಣದ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
 • ಯುವಾ ಬ್ರಿಗೇಡ್ ಶಿವಮೊಗ್ಗ ವತಿಯಿಂದ ನಗರದ ಗೋಮಾಳದಲ್ಲಿರುವ ಆದಿ ರಂಗನಾಥ ದೇವಸ್ಥಾನವನ್ನು ಸ್ವಚ್ಛಗೊಳಿಸಲಾಯಿತು.
 • ಧಾರವಾಡ ಯುವಾಬ್ರಿಗೇಡ್‌ ವತಿಯಿಂದ ದುರ್ಗಾ ದೇವಿ ದೇವಸ್ಥಾನದ ಒಳಾಂಗಣ ಆವರಣವನ್ನು ಸ್ವಚ್ಛ ಗೊಳಿಸಲಾಯಿತು.
top