ಕಪಿಲಾ ಆರತಿ

ಕಪಿಲಾ ಆರತಿ

“Kapila Arati” is the program organised by yuva brigade at ‘kapila snanaghatta’ in the banks of the river kapila after cleaning it in several stages, Kapila Arati resembles Ganga Arati, main intension of such program is to create awareness among people about water resources.

ಯುವಾ ಬ್ರಿಗೇಡ್ ನಂಜನಗೂಡು ವತಿಯಿಂದ ಕಪಿಲಾ ನದಿ ಸ್ವಚ್ಛತೆಯ ಕಾರ್ಯ ಸರಗೂರು ಭಾಗದಿಂದ ಆರಂಭವಾಗಿ, ಸರಗೂರು ಜಪದ ಕಟ್ಟೆ, ಸೋಮೇಶ್ವರ ದೇವಾಲಯ ಹಾಗೂ ತುಂಬುಸೊಗೆಯ ಸೇತುವೆ ಬಳಿ ಸ್ವಚ್ಛತಾ ಕಾರ್ಯ ಮಾಡಿ ಮೂರು ಟ್ರ್ಯಾಕ್ಟರ್‌ನಷ್ಟು ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಿ ಸರಗೂರಿನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಕಪಿಲೆ ಸ್ವಚ್ಛತೆಯ ಅರಿವು ಮೂಡಿಸುವ ಜಾಗೃತಿ ಜಾಥ ಮಾಡಿ ಕಪಿಲೆಯ ಮಹತ್ವದ ಕುರಿತು ಬೀದಿ ಬೀದಿಗಳಲ್ಲಿ ವಿಡಿಯೋ ಪ್ರದರ್ಶನ ಮಾಡಲಾಯಿತು. ಹೀಗೆ ಹಲವು ಹಂತಗಳಲ್ಲಿ ಕಪಿಲಾ ನದಿಯ ಸ್ನಾನಘಟ್ಟ ಸ್ವಚ್ಛಗೊಂಡಿತು.
ದಿನಾಂಕ: 30.12.2020 ರಂದು ಯುವಾ ಬ್ರಿಗೇಡ್ ವತಿಯಿಂದ ನಂಜನಗೂಡಿನಲ್ಲಿ “ಕಪಿಲಾ ಆರತಿ” ಮತ್ತು ಲಕ್ಷದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ಸ್ವಾಮಿಗಳು, ಮೈಸೂರು ರಾಮಕೃಷ್ಣ ಆಶ್ರಮದ ಶ್ರೀ ಶಾಂತಿವ್ರತಾನಂದಜಿ ಮಹಾರಾಜ್, ಮತ್ತು ಯುವಾ ಬ್ರಿಗೇಡ್‌ನ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಕಪಿಲಾ ನದಿಯ ಸ್ನಾನಘಟ್ಟ ಸ್ವಚ್ಛಗೊಂಡ ಬಗೆಯನ್ನು ವೀಕ್ಷಿಸಲು ಈ ಕೆಳಗಿನ ವಿಡಿಯೋ ಲಿಂಕ್ ಬಳಸಿ

https://www.facebook.com/100003882799345/videos/1963917197081021

top