ಕಂಪು-KAmpU

ಕಂಪು-KAmpU

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಧಾವಂತದ ಬದುಕಿನ ನಡುವೆ ಪುಸ್ತಕ ಓದುವ ತಾಳ್ಮೆಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ, ಇಂತಹ ಪರಿಸ್ಥಿತಿಯ ನಡುವೆಯೂ ಖ್ಯಾತ ಪುಸ್ತಕಗಳನ್ನು, ಶ್ರೇಷ್ಠ ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕೆಂಬ ಹಂಬಲ ಇರುವವರಿಗಾಗಿ ಯುವಾ ಬ್ರಿಗೇಡ್ ಡಾ|ಅಂಬೇಡ್ಕರ್ ಅವರ ಸ್ಮೃತಿ ದಿನದ ಅಂಗವಾಗಿ ‘ಕಂಪು’ ಕೇಳು ಪುಸ್ತಕ(Audio book) App ಕನ್ನಡ ಜನತೆಗೆ ಕೊಡುಗೆಯಾಗಿ ನೀಡಿದೆ. ಈ app ನಲ್ಲಿ ಬೇರೆ ಬೇರೆ ಕನ್ನಡ ಪುಸ್ತಕಗಳ ವಿಷಯಗಳನ್ನು ಖ್ಯಾತ ವ್ಯಕ್ತಿಗಳ ಧ್ವನಿಯಲ್ಲಿ ಅತ್ಯುತ್ತಮ ಮ್ಯೂಸಿಕ್ ಜೊತೆಗೆ ಕೇಳಿ ತಿಳಿದುಕೊಳ್ಳಬಹುದು. KAmpU ಅಂದರೆ Kannada Amplifies U ಎಂದರ್ಥ, ಅರ್ಥಾತ್ ಕನ್ನಡ ನಿಮ್ಮನ್ನು ವಿಸ್ತಾರಗೊಳಿಸುತ್ತದೆ. ಕನ್ನಡಿಗರು ದೇಶದ ಸಂಸ್ಕೃತಿ, ಮಹನೀಯ ವ್ಯಕ್ತಿಗಳ ರೋಚಕ ಘಟನೆಗಳು , ಅವರ ಶ್ರೇಷ್ಠ ವಿಚಾರಧಾರೆಗಳಿಂದ ವಂಚಿತರಾಗದೆ ಜ್ಞಾನಾರ್ಜನೆಯಲ್ಲಿ ಮುಂಚೂಣಿಗೆ ಬರಬೇಕೆಂಬುದು ಈ ಯೋಜನೆಯ ಉದ್ದೇಶ.

ನೀವೂ #KAmpU -(Kannada amplifies you)- ಕೇಳು ಪುಸ್ತಕವನ್ನು ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಒತ್ತಿ ಡೌನ್‌ಲೋಡ್ ಮಾಡಿಕೊಳ್ಳಿ. ಕನ್ನಡದ ‘ಕಂಪ’ನ್ನು ಜನಮನಗಳಿಗೆ ಪಸರಿಸಿ.

top