ಅಮ್ಮ ನಮನ

ಅಮ್ಮ ನಮನ

In the time of corona pandemic asha workers worked Tirelessly, So, on the occasion of ‘sharada mata jayanti’ yuva brigade and sodari nivedita pratishtana decided to do padapooja to pay a tribute to their work. The program was called “amma namana”.

ಜಗಜ್ಜನನಿ ಶಾರದಾದೇವಿಯವರ ಜಯಂತಿಯ ಪ್ರಯುಕ್ತ ಈ ಬಾರಿ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತೆಯರು “ಅಮ್ಮ ನಮನ” ಎನ್ನುವ ಹೆಸರಿನಲ್ಲಿ ಕೊರೊನ ಸಂಕಷ್ಟದ ಸಮಯದಲ್ಲೂ ದಣಿವರಿಯದೇ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರ ಸನ್ಮಾನ ಕಾರ್ಯಕ್ರಮ ರಾಜ್ಯದಾದ್ಯಂತ ಆಯೋಜಿಸಿತು.

ಯುವಾ ಬ್ರಿಗೇಡ್ ಹಮ್ಮಿಕೊಂಡ ಕಾರ್ಯಕ್ರಮಗಳು

 • ಶಾರದಾ ಮಾತೆಯ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ “ಅಮ್ಮ ನಮನ” ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಹೆಗ್ಗನಹಳ್ಳಿ, ಬಾಪೂಜಿ ನಗರ, ಅನೇಕಲ್, ಬೊಮ್ಮನಹಳ್ಳಿಗಳಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು ಮತ್ತು ದಾದಿಯರಿಗೆ ಪಾದಪೂಜೆ ಮಾಡಿ ಗೌರವ ಸೂಚಿಸಲಾಯಿತು.
 • ಮಾತೆ ಶಾರದಾದೇವಿ ಜಯಂತಿಯ ಪ್ರಯುಕ್ತ ಯುವಾ ಬ್ರಿಗೇಡ್ ಕಾರಟಗಿ ಹಾಗೂ ಚಿರನೂತನ ಮಹಿಳಾ ಸಂಘದ ಸಹಯೋಗದೊಂದಿಗೆ ಆಯೋಜಿಸಿದ “ಅಮ್ಮ ನಮನ” ಆಶಾ ಕಾರ್ಯಕತೆಯರಿಗೆ ಪಾದಪೂಜೆ ಕಾರ್ಯಕ್ರಮ ಅದ್ಭುತವಾಗಿ ನೆರವೇರಿತು.
 • ಯುವಾ ಬ್ರಿಗೇಡ್ ಮಸ್ಕಿ ವತಿಯಿಂದ ಆಶಾ ಕಾರ್ಯಕತೆಯರಿಗೆ ಪಾದಪೂಜೆ ‘ಅಮ್ಮ ನಮನ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.
 • ಶಾರದಾ ಮಾತೆಯ ಜಯಂತಿಯ ಪ್ರಯುಕ್ತ ರಾಜ್ಯದಾದ್ಯಂತ ಹಮ್ಮಿಕೊಂಡ “ಅಮ್ಮ ನಮನ” ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಜಿಲ್ಲೆಯ ತಾವರಗೇರಿ ಪಟ್ಟಣದ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡಿ ಗೌರವ ಸೂಚಿಸಲಾಯಿತು
 • ಶಾರದಾಮಾತೆಯ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಅಮ್ಮ ನಮನ ಕಾರ್ಯಕ್ರಮವು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು ಮತ್ತು ದಾದಿಯರಿಗೆ ಪಾದಪೂಜೆ ಮಾಡಿ ಗೌರವ ಸಮರ್ಪಿಸಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡಿ ಗೌರವ ಸೂಚಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಯಶವಂತಪುರದಲ್ಲಿ ಶಾರದಾಮಾತೆ_ಜಯಂತಿ ಯನ್ನು ಆಶಾ ಕಾರ್ಯಕರ್ತೆಯರಿಗೆ ಪಾದ ಪೂಜೆ ಮಾಡಿ ಗೌರವ ಸಮರ್ಪಿಸುವ ಮೂಲಕ ಆಚರಿಸಲಾಯಿತು.
 • ಯುವಾ ಬ್ರಿಗೇಡ್ ಹೊನ್ನಾವರ ವತಿಯಿಂದ ಶಾರದಾಮಾತೆ ಜಯಂತಿಯ ಪ್ರಯುಕ್ತ ಗುಣವಂತೆ ಗ್ರಾಮದಲ್ಲಿ ಕೊರೊನ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಪಾದಪೂಜೆ ಮಾಡುವುದರ ಮೂಲಕ ಗೌರವ ಸಮರ್ಪಿಸಲಾಯಿತು.
 • ಶಾರದಾ ಮಾತೆಯ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ “ಅಮ್ಮ ನಮನ” ಕಾರ್ಯಕ್ರಮದ ಅಂಗವಾಗಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು ಮತ್ತು ಪೌರ ಕಾರ್ಮಿಕರಿಗೆ ಪಾದಪೂಜೆ ಮಾಡಿ ಗೌರವ ಸೂಚಿಸಲಾಯಿತು.
 • ಯುವಾ ಬ್ರಿಗೇಡ್ ಗುತ್ತಲ ಹಾಗೂ ಹಿಂದೂ ಜಾಗರಣ ವೇದಿಕೆ ಗುತ್ತಲ ವತಿಯಿಂದ ಶಾರದಾ ಮಾತೆ ಜಯಂತಿಯ ಪ್ರಯುಕ್ತ ಗುತ್ತಲ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡಿ ಗೌರವ ಸಮರ್ಪಿಸಲಾಯಿತು
 • ಶಾರದಾ ಮಾತೆಯ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ “ಅಮ್ಮ ನಮನ” ಕಾರ್ಯಕ್ರಮದ ಅಂಗವಾಗಿ ಮೈಸೂರು ಜಿಲ್ಲೆಯ ಸರಗೂರಿನಲ್ಲಿ ತಾಯಂದಿರಿಗೆ ಪಾದಪೂಜೆ ಮಾಡಲಾಯಿತು.
 • ಶಾರದಾಮಾತೆಯ ಜಯಂತಿ ಪ್ರಯುಕ್ತ ಹಮ್ಮಿಕೊಂಡ ಅಮ್ಮ ನಮನ ಕಾರ್ಯಕ್ರಮವು ಕೋಲಾರ ಜಿಲ್ಲೆ, ಕೊಳತೂರು ಗ್ರಾಮದಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರ ಜೊತೆ ಸಹಭೋಜನ ಮಾಡಿ, ಪಾದಪೂಜೆ ಮಾಡಿ ಗೌರವ ಸಮರ್ಪಿಸಲಾಯಿತು.
 • ಶಾರದಾ ಮಾತೆಯ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ “ಅಮ್ಮ ನಮನ” ಕಾರ್ಯಕ್ರಮದ ಅಂಗವಾಗಿ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಕೊರೋನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು ಮತ್ತು ದಾದಿಯರಿಗೆ ಪಾದಪೂಜೆ ಮಾಡಿ ಗೌರವ ಸೂಚಿಸಲಾಯಿತು.
 • ಸೂಳೆಭಾವಿಯ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಶಾರದಾ ಮಾತೆಯ ಜಯಂತಿಯನ್ನು ಆಶಾ ಕಾರ್ಯಕರ್ತೆಯರಿಗೆ ಪಾದಪೂಜೆ ಸಲ್ಲಿಸುವುದರ ಮೂಲಕ ‘ಅಮ್ಮನ ಪೂಜೆ’ಯ ದಿನವನ್ನಾಗಿ ಆಚರಿಸಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ಶ್ರೀರಂಗಪಟ್ಟಣದಲ್ಲಿ ಶಾರದಾಮಾತೆ ಜಯಂತಿಯ ಅಂಗವಾಗಿ ಕೊರೊನ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರಿಗೆ ಪಾದಪೂಜೆಯ ಮೂಲಕ ಗೌರವ ಸಮರ್ಪಿಸಲಾಯಿತು.
 • ಯುವಾ ಬ್ರಿಗೇಡ್ ವತಿಯಿಂದ ಸಿರುಗುಪ್ಪ ನಗರದಲ್ಲಿ ಶಾರದಾಮಾತೆಯ ಜಯಂತಿಯ ಪ್ರಯುಕ್ತ ಆಶಾ ಕಾರ್ಯಕರ್ತೆಯರಿಗೆ ಪಾದಪೂಜೆಯ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
 • ಹೊಸಪೇಟೆ ಯುವಾ ಬ್ರಿಗೇಡ್ ವತಿಯಿಂದ ಅಮ್ಮ ನಮನ ಕಾರ್ಯಕ್ರಮವನ್ನು ಹಂಸಾಂಬ ಆಶ್ರಮದಲ್ಲಿ ನೆರವೇರಿಸಲಾಯಿತು.

ಸೋದರಿ ನಿವೇದಿತಾ ಪ್ರತಿಷ್ಣನಾದ ವತಿಯಿಂದ ಆಯೋಜನೆಗೊಂಡ ಕಾರ್ಯಕ್ರಮಗಳು

 • ಸೋದರಿ ನಿವೇದಿತಾ ಪ್ರತಿಷ್ಠಾನ ಅರಸೀಕೆರೆ ಶಾರದಾಮಾತೆಜಯಂತಿ ಆಚರಣೆಯನ್ನು ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿದ ಮತ್ತು ಈಗಲೂ ಸೇವೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ದಾದಿಯರಿಗೆ (ನರ್ಸ )ಪಾದ ಪೂಜೆ ಮಾಡಿ ಗೌರವ ಸಮರ್ಪಿಸಲಾಯಿತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತೆಯರು ಕೊಳ್ಳೇಗಾಲದ ರಾಮಕೃಷ್ಣ ಮಂದಿರದಲ್ಲಿ #ಅಮ್ಮನಮನ ಕಾರ್ಯಕ್ರಮವನ್ನು ನೆರವೇರಿಸಿದರು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಬೆಂಗಳೂರು ಶಾರದಾಮಾತೆ ಜಯಂತಿಯನ್ನು ಆಶಾ ಕಾರ್ಯಕರ್ತೆಯರಿಗೆ ಪಾದ ಪೂಜೆ ಮಾಡಿ ಗೌರವ ಸಮರ್ಪಿಸುವ ಮೂಲಕ ಆಚರಿಸಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಶಿವಮೊಗ್ಗದಲ್ಲಿ ಜಗಜ್ಜನನಿ ಶಾರದಾದೇವಿಯವರ ಜಯಂತಿಯ ಪ್ರಯುಕ್ತ ಆಶಾ ಕಾರ್ಯಕರ್ತೆಯರಿಗೆ ಪಾದಪೂಜೆ ಕಾರ್ಯಕ್ರಮ ನಡೆಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ, ಮೈಸೂರು; ಬೆಳವಾಡಿಯ ಅಂಗನವಾಡಿ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಪಾದಪೂಜೆ ಮಾಡುವ ಮೂಲಕ ಶಾರದಾಮಾತೆ ಜಯಂತಿ ಆಚರಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನದ ಸೋದರಿಯರು ಬಳ್ಳಾರಿಯಲ್ಲಿ ಮಾತೆ ಶಾರದಾದೇವಿಯವರ ಜನ್ಮದಿನದ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಪಾದಪೂಜೆ ಕಾರ್ಯಕ್ರಮ ನೆರವೇರಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ,ಹುಬ್ಬಳ್ಳಿ-ಧಾರವಾಡ ವತಿಯಿಂದ ಶಾರದಾಮಾತೆ ಜಯಂತಿಯ ಪ್ರಯುಕ್ತ ನವನಗರ ಗಾಮನಗಟ್ಟಿ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಪಾದ ಪೂಜೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.
 • ಶಾರದ ಮಾತೆಯವರ ಜಯಂತಿಯ ಪ್ರಯುಕ್ತ ಅಮ್ಮ ನಮನ ಕಾರ್ಯಕ್ರಮವನ್ನು ತರೀಕೆರೆ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ ವತಿಯಿಂದ ಕೊರೋನಾದ ಕಷ್ಠದ ಸಮಯದಲ್ಲಿ ಜೀವದ ಹಂಗು ತೊರೆದು ಸಮಾಜದ ಆರೋಗ್ಯಕ್ಕಾಗಿ ದುಡಿದ ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡುವ ಮೂಲಕ ಗೌರವಿಸಲಾಯಿತು.
 • ದಾವಣಗೆರೆ ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಶಾರದಾಮಾತೆ ಜಯಂತಿ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯ ಸಭಾಂಗಣದಲ್ಲಿ ನೇರೆವೇರಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ‌ ಬಾಗಲಕೋಟೆ ರಬಕವಿ ಬನಹಟ್ಟಿಯ ತಂಡದಿಂದ ಶಾರದಾಮಾತೆ ಜಯಂತಿ ಅಂಗವಾಗಿ ಆಶಾ ಕಾರ್ಯಕರ್ತೆಯರು ಮತ್ತು ದಾದಿಯರಿಗೆ ಪಾದ ಪೂಜೆ ಮಾಡಿ ಗೌರವ ಸಮರ್ಪಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಬೆಂಗಳೂರು ಗ್ರಾಮಾಂತರ ವತಿಯಿಂದ ಬೂದಿಗೆರೆ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವ ಸಮರ್ಪಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ತುಮಕೂರಿನ ವತಿಯಿಂದ ಮಾತೆ ಶಾರದಾದೇವಿಯವರ ಜಯಂತಿಯ ಪ್ರಯುಕ್ತ ಕೊರೊನ ಸಂಕಷ್ಟ ಕಾಲದಲ್ಲೂ ದಣಿವರಿಯದೇ ದುಡಿದ ಆಶಾ ಕಾರ್ಯಕರ್ತೆಯರಿಗೆ ಮಡಿಲು ತುಂಬಿ ಗೌರವ ಸಮರ್ಪಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಧಾರವಾಡ ವತಿಯಿಂದ ಯರೇಬೂದಿಹಾಳ ದಲ್ಲಿ ಶಾರದಾಮಾತೆ ಜಯಂತಿಯ ಪ್ರಯುಕ್ತ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರಿಗೆ ಗೌರವ ಸಮರ್ಪಿಸಲಾಯಿತು.
 • ಶಾರದಾಮಾತೆ ಜಯ೦ತಿಯ ಪ್ರಯುಕ್ತ ಸೋದರಿ ನಿವೇದಿತಾ ಪ್ರತಿಷ್ಠಾನ ಬೆಂಗಳೂರು ಗ್ರಾಮಾಂತರ ವಿಜಯಪುರ ವತಿಯಿ೦ದ ವಿಜಯಪುರದ ಸ೦ತೆ ಮೆೃದಾನದಲ್ಲಿರುವ ಅ೦ಗನವಾಡಿ ಕೇ೦ದ್ರದಲ್ಲಿ ಕರೋನಾ ವಾರಿಯಸ್೯ ಆಗಿ ಕೆಲಸ ನಿರ್ವಹಿಸಿದ್ದ ಮತ್ತು ಸೇವೆಯಲ್ಲಿರುವ ಆಶಾ ಕಾಯ೯ಕತ೯ರಿಗೆ ಪಾದಪೂಜೆ ಕಾಯ೯ಕ್ರಮ ನಡೆಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಚಿಕ್ಕಮಗಳೂರು ವತಿಯಿಂದ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾರದಾಮಾತೆ ಜಯಂತಿ ಆಚರಿಸಲಾಯಿತು. ದಾದಿಯರು ಹಾಗೂ ಆಶಾ ಕಾರ್ಯಕರ್ತರ ಸೇವೆಗೆ ಕೃತಜ್ಞತೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಬೆಂಗಳೂರು, ಉತ್ತರಹಳ್ಳಿ ವತಿಯಿಂದ ಶಾರದಾಮಾತೆ ಜಯಂತಿಯನ್ನು ಆಶಾ ಕಾರ್ಯಕರ್ತೆಯರಿಗೆ ಪಾದ ಪೂಜೆ ಮಾಡಿ ಗೌರವ ಸಮರ್ಪಿಸುವ ಮೂಲಕ ಆಚರಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಸಿದ್ಧಾಪುರ ಇಲ್ಲಿಯ ಹೊಸ ತಂಡ ಶಾರದಾಮಾತೆ ಜಯಂತಿಯ ಅಂಗವಾಗಿ ಆಶಾ ಕಾರ್ಯಕರ್ತೆಯರು, ದಾದಿಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಪಾದ ಪೂಜೆ ಮಾಡುವುದರ ಮೂಲಕ ನಮನ ಸಲ್ಲಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಅಡ್ಯನಡ್ಕ ಮತ್ತು ಯುವಾ ಬ್ರಿಗೇಡ್ ಅಡ್ಯನಡ್ಕ ಇದರ ವತಿಯಂದ, ಅಡ್ಯನಡ್ಕ ದ ಜನತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “#ಅಮ್ಮ_ನಮನ” ಕಾರ್ಯಕ್ರಮ ನಡೆಸಲಾಯಿತು.
 • ಬೆಳಗಾವಿ ನಗರದಲ್ಲಿ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಶ್ರೀ ಶಾರದಾ ಮಾತೆಯ ಜಯಂತಿ ಅಂಗವಾಗಿ ಅಮ್ಮನಮನ ಕಾರ್ಯಕ್ರಮ ಮಾಡಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ‌ ಹೊಸಪೇಟೆ ವತಿಯಿಂದ ಶಾರದಾಮಾತೆ ಜಯಂತಿ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಪಾದ ಪೂಜೆ ಮಾಡಿ ಗೌರವ ಸಮರ್ಪಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಚೆನ್ನೈ ವತಿಯಿಂದ ಶಾರದಾಮಾತೆ ಜಯ೦ತಿಯ ಅಂಗವಾಗಿ ದಾದಿಯರಿಗೆ ಪಾದ ಪೂಜೆ ಮಾಡಿ ಗೌರವ ಸಮರ್ಪಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ತರೀಕೆರೆ ತಂಡದಿಂದ ಶಾರದಾಮಾತೆ ಜಯಂತಿಯ ಅಂಗವಾಗಿ ಆಶಾ ಕಾರ್ಯಕರ್ತೆಯರಿಗೆ ಗೌರವ ಸಮರ್ಪಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಬೊಮ್ಮನಹಳ್ಳಿಯಲ್ಲಿ ಶಾರದಾಮಾತೆ ಜಯಂತಿಯನ್ನು ಆಶಾ ಕಾರ್ಯಕರ್ತೆಯರಿಗೆ ಪಾದ ಪೂಜೆ ಮಾಡಿ ಗೌರವ ಸಮರ್ಪಿಸುವ ಮೂಲಕ ಆಚರಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಬೂದಗುಂಪಾ, ಕೊಪ್ಪಳ ಜಿಲ್ಲೆಯಲ್ಲಿ ಶಾರದಾಮಾತೆ ಜಯಂತಿಯ ಪ್ರಯುಕ್ತ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರಿಗೆ ಗೌರವ ಸಮರ್ಪಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ, ಕೊಪ್ಪಳ ನಗರ, ಕೊಪ್ಪಳ ಜಿಲ್ಲೆಯಲ್ಲಿ ಶಾರದಾಮಾತೆ ಜಯಂತಿ ಅಂಗವಾಗಿ ಆಶಾ ಕಾರ್ಯಕರ್ತೆಯರ ಉಡಿ ತುಂಬಿ ಗೌರವ ಮನ ಸಲ್ಲಿಸಲಾಯಿತು.
 • ಸೋದರಿ ನಿವೇದಿತಾ ಪ್ರತಿಷ್ಠಾನ ಹುಬ್ಬಳ್ಳಿ ಧಾರವಾಡ ಮಾತಾ ಆಶ್ರಮದಲ್ಲಿ ದಾದಿಯರ ಪಾದ ಪೂಜೆ ನೆರವೇರಿಸಿ ಉಡಿ ತುಂಬಲಾಯಿತು.

top